ತಪ್ಪಿದ 2 ಭಾರೀ ವಿಮಾನ ದುರಂತ..!
ಗೋವಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗಿನ ಜಾವ ಮುಂಬೈಗೆ ಹಾರಲು ಅಣಿಯಾಗುತ್ತಿದ್ದ ಜೆಟ್ ಏರ್‌ವೇಸ್‌ನ ವಿಮಾನವು ರನ್ ವೇನಿಂದ ಜಾರಿ ಸಂಪೂರ್ಣವಾಗಿ ತಿರುಗಿ ನಿಂತಿದ್ದು, ಅದರಲ್ಲಿದ್ದ 161 ಜನರು ಪವಾಡಸದೃಶವಾಗಿ ಪಾರಾಗಿದ್ದಾರೆ. ವಿಮಾನವು 360 ಡಿಗ್ರಿ ಕೋನದಲ್ಲಿ ತಿರುಗಿ ನಿಂತಿದ್ದು, ಅದರ ಲ್ಯಾಂಡಿಂಗ್ ಗೇರ್‌ಗೆ ಹಾನಿಯುಂಟಾಗಿದೆ.
ಇನ್ನೊಂದೆಡೆ ದಿಲ್ಲಿ ವಿಮಾನ ನಿಲ್ದಾಣದ ಟ್ಯಾಕ್ಸಿವೇನಲ್ಲಿ ಬೆಳಗ್ಗೆ ಪ್ರಯಾಣಿಕರಿಂದ ತುಂಬಿದ್ದ ಎರಡು ವಿಮಾನಗಳು ಕೇವಲ 40 ಮೀ.ಅಂತರದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು, ಸಮಯಪ್ರಜ್ಞೆಯನ್ನು ಮೆರೆದ ಎರಡೂ ವಿಮಾನಗಳ ಕಮಾಂಡರ್‌ಗಳು ವಾಯು ಸಂಚಾರ ನಿಯಂತ್ರಣ(ಎಟಿಸಿ) ಕೊಠಡಿಗೆ ತಕ್ಷಣವೇ ಮಾಹಿತಿ ನೀಡಿ ಇಂಜಿನ್‌ಗಳನ್ನು ಬಂದ್ ಮಾಡಿದ್ದರಿಂದ ಸಂಭಾವ್ಯ ಭಾರೀ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಎಟಿಸಿಯ ತಪ್ಪು ಸಂದೇಶ ಈ ಘಟನೆಗೆ ಕಾರಣವೆನ್ನಲಾಗಿದೆ.
Next Story





