ಪ್ಯಾಂಟ್ ಜೇಬಲ್ಲಿ ಸಿಡಿದ ಮೊಬೈಲ್: ಯುವಕನಿಗೆ ಗಾಯ

ಬಾಗಲಕೋಟೆ, ಡಿ.28: ಪ್ಯಾಂಟಿನ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್‌ವೊಂದು ಸಿಡಿದು ಯುವಕನೊಬ್ಬ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪಅನಗವಾಡಿ ಗಾಯಗೊಂಡ ಯುವಕ. ಸಿದ್ದಪ್ಪ ತನ್ನ ಮನೆಯಲ್ಲಿ ಮೊಬೈಲ್ ಫೋನ್‌ನ್ನು ಜೇಬಲ್ಲಿಟ್ಟುಕೊಂಡಿದ್ದ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಮೊಬೈಲ್ ಒಮ್ಮೆಲೆ ಸಿಡಿದಿದೆ. ಇದರ ತೀವ್ರತೆಗೆ ಸಿದ್ದಪ್ಪರ ತೊಡೆಗೆ ಗಾಯವಾಗಿದೆ. ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.
Next Story





