ನೋಟು ನಿಷೇಧ: ಪ್ರಧಾನಿ ಮೋದಿಗೆ ಕಾಂಗ್ರೆಸ್‌ನಿಂದ ಪ್ರಶ್ನೆ

ಹೊಸದಲ್ಲಿ, ಡಿ.28: ನೋಟು ನಿಷೇಧಗೊಳಿಸಿ 50 ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿದ್ದಾರೆ.
ನ.8ರಂದು ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳ ನಿಷೇಧ ಮಾಡಿದ 50 ದಿನಗಳಾಗುತ್ತಾ ಬಂದಿದ್ದು ಪ್ರಧಾನಿಗಳು ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ.
ನ.8ರ ಬಳಿಕ ಎಷ್ಟು ಕಾಳ ಧನ ಸಂಗ್ರಹವಾಗಿದೆ? ನೋಟು ನಿಷೇಧದ ಬಳಿಕ ದೇಶದ ಆರ್ಥಿಕತೆಯ ಮೇಲೆ ಎಷ್ಟು ನಷ್ಟವಾಗಿದೆ?, ಎಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ನ.8ರ ಬಳಿಕ ಎಷ್ಟು ಜನರು ಸಾವನ್ನಪ್ಪಿದ್ದಾರೆ, ಇವರಿಗೆ ಪರಿಹಾರ ನೀಡಲಾಗಿದೆಯೇ?, ನೋಟು ನಿಷೇಧಕ್ಕೆ ಮೊದಲು ಪ್ರಧಾನಮಂತ್ರಿ ಯಾವ ತಜ್ಞರನ್ನು ಸಂಪರ್ಕಿಸಿದ್ದಾರೆ? ಎಂದು ದೇಶದ ಜನರಿಗೆ ಪ್ರಧಾನಮಂತ್ರಿ ಉತ್ತರಿಸಬೇಕು ಎಂದು ರಾಹುಲ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
Next Story





