ಜ.3: ಸ್ನೇಹ ಸಂದೇಶ ಯಾತ್ರೆಗೆ ಮದ್ದಡ್ಕದಲ್ಲಿ ಭವ್ಯ ಸ್ವಾಗತ
ಸಿರಾಜುಲ್ ಹುದಾ ಕುಟ್ಯಾಡಿ ಬೆಳ್ಳಿಹಬ್ಬದ ಪ್ರಚಾರ ಸಮ್ಮೇಳನ

ಬೆಳ್ತಂಗಡಿ, ಡಿ.28: ಕೇರಳದ ಪ್ರಸಿದ್ಧ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ಕೇಂದ್ರ ಸಿರಾಜುಲ್ ಹುದಾ ಕುಟ್ಯಾಡಿ ಇದರ ಬೆಳ್ಳಿಹಬ್ಬದ ಪ್ರಚಾರಾರ್ಥ ಪೇರೋಡ್ ಅಬುರ್ರಹ್ಮಾನ್ ಸಖಾಫಿ ನೇತೃತ್ವದಲ್ಲಿ ತಾಲೂಕಿಗೂ ಆಗಮಿಸುತ್ತಿರುವ ‘ಸ್ನೇಹ ಸಂಗಮ ಯಾತ್ರೆ’ಗೆ ಜ.3ರಂದು ಮದ್ದಡ್ಕದಲ್ಲಿ ಭವ್ಯ ಸ್ವಾಗತ ಕೋರಲಾಗುವುದು. ಬಳಿಕ ಮದ್ದಡ್ಕ ಮಸೀದಿ ವಠಾರದಲ್ಲಿ ಬೆಳ್ಳಿಹಬ್ಬದ ಪ್ರಚಾರಾರ್ಥ ಸ್ವೀಕರಣ ಮಹಾಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಕೆ.ಬದ್ರುದ್ದೀನ್ ಪರಪ್ಪು ಹೇಳಿದ್ದಾರೆ.
ಬೆಳ್ತಂಗಡಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಪರಾಹ್ನ 2 ಗಂಟೆಯಿಂದ ಆರಂಭವಾಗುವ ಸಮ್ಮೇಳನದಲ್ಲಿ ಪೇರೋಡ್ ಉಸ್ತಾದ್‌ಅವರನ್ನು ತಾಲೂಕಿನ ಪರವಾಗಿ ಸನ್ಮಾನಿಸಲಾಗುವುದು. ಬಳಿಕ ಸಮ್ಮೇಳನವನ್ನುದ್ದೇಶಿಸಿ ಅವರು ಸಂದೇಶ ನೀಡಲಿದ್ದಾರೆ. ಇದಕ್ಕೂ ಮೊದಲು ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಅಶ್ರಫ್ ಸಅದಿ ಮಲ್ಲೂರು, ಮುಹಮ್ಮದಲಿ ಸಖಾಫಿ ಅಶ್‌ಅರಿಯ್ಯ ಮತ್ತು ಸುಫ್ಯಾನ್ ಸಖಾಫಿ ಭಾಷಣ ಮಾತುವಡುರ. ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಾದಾತ್ ತಂಙಳ್ ಸಮ್ಮೇಳನವನ್ನು ಉದ್ಘಾಟಿಸುವರು ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪ್ರಮುಖ ಸಂಯೋಜಕ ಅಬ್ಬೋನು ಮದ್ದಡ್ಕ, ಮದ್ದಡ್ಕ ಜಮಾಅತ್ ಅಧ್ಯಕ್ಷ ರಾಝಿಯುದ್ದೀನ್ ಸಬರಬೈಲು, ಮದ್ದಡ್ಕ ಮಸೀದಿಯ ಉಪಾಧ್ಯಕ್ಷ ಅಶ್ರಫ್ ಚಿಲಿಂಬಿ, ಪತ್ರಕರ್ತ ಅಶ್ರಫ್ ಅಲಿಕುಂಞಿ ಮುಂಡಾಜೆ ಮೊದಲಾದವರು ಉಪಸ್ಥಿತರಿದ್ದರು.





