ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಶಾಮೀಲಾಗಿದ್ದ ಎಸ್‌ಬಿಎಂ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಬೆಂಗಳೂರು, ಡಿ.28: ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟ ಪ್ರಕರಣದಲ್ಲಿ ಶಾಮೀಲಾಗಿದ್ದ ಎಸ್‌ಬಿಎಂ ಬ್ಯಾಂಕ್ ಉದ್ಯೋಗಿ ರವಿರಾಜ್(55 ವರ್ಷ) ಎಂಬುವವರು ಗುರುವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ರವಿರಾಜ್ ಬ್ಯಾಂಕ್ ಉದ್ಯೋಗದಿಂದ ಅಮಾನತುಗೊಂಡ ಪತ್ರ ಕೈಸೇರಿದ ತಕ್ಷಣವೇ ವಿವೇಕ ನಗರದಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿವೇಕ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿರಾಜ್ ಸೇರಿ ಹಲವರ ವಿರುದ್ಧ ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿತ್ತು.
ನಗರದ ಅವೆನ್ಯೂ ರಸ್ತೆಯಲ್ಲಿ ಎಸ್‌ಬಿಎಂ ಬ್ಯಾಂಕ್‌ನಲ್ಲಿ ಮುಖ್ಯ ಕ್ಯಾಶಿಯರ್ ಆಗಿದ್ದ ರವಿರಾಜ್, ಮಲ್ಬಾರಿ ಎಂಬುವವನಿಗೆ ಸೇರಿದ್ದ 20 ಲಕ್ಷ ರೂ. ಕಪ್ಪು ಹಣವನ್ನು ಬಿಳಿ ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದರು.
Next Story





