ಮಡಿಕೇರಿಯಲ್ಲಿ ಅಪಘಾತ : ಸ್ಕೂಟರ್ ಸವಾರ ಮಂಗಳೂರಿನಲ್ಲಿ ಸಾವು

ಸುಂಟಿಕೊಪ್ಪ, ಡಿ.28: ಕಾರು ಹಾಗೂ ಸ್ಕೂಟರ್ ಪರಸ್ಪರ ಡಿಕ್ಕಿಯಾದ ಪರಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಸಾವನ್ನಾಪ್ಪಿದ ಘಟನೆ ನಡೆದಿದೆ.
ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯ ತೋಟದ ಬಳಿ ಜ. 25 ರ ಸಂಜೆ 6.30ರ ಸಂದರ್ಭ ಅಲ್ಟೋಕಾರು ಹಾಗೂ ಹೊಂಡಾ ಆಕ್ಟೀವ ಸ್ಕೂಟರ್ ನಡುವೆ ಮುಖಾಮುಖಿ ಢಿಕ್ಕಿಯಾಗಿದ್ದು , ಸ್ಕೂಟರ್ ಸವಾರ ಗುಂಡುಗುಟ್ಟಿಯ ಬಾಲಕೃಷ್ಣ(45) ತಲೆ ಎದೆ ಕೈಕಾಲುಗಳಿಗೆ ಗಂಭೀರ ಗಾಯಗೊಂಡಿದ್ದರು.
ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಸ್ಕೂಟರ್ ಹಿಂಬದಿ ಸವಾರ ವಸಂತ ಸಣ್ಣಪುಟ್ಟ ಗಾಯಗಳಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಅಪಘಾತದ ರಭಸಕ್ಕೆ ಕೆನೆಟಿಕ್ ಹೊಂಡಾ ನಜ್ಜು ಗುಜ್ಜಾಗಿತ್ತು.
ಕಾರು ಚಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮೊಕದ್ದಮೆ ದಾಖಲಿಸಿ ಕ್ರಮಕೈಗೊಂಡಿದ್ದಾರೆ.
Next Story





