ಉಡುಪಿಯಲ್ಲಿ ಸಚಿವ ಆಂಜನೇಯ ಗ್ರಾಮ ವಾಸ್ತವ್ಯ : ಉಸ್ತುವಾರಿ ಸಚಿವರಿಂದ ಪೂರ್ವಭಾವಿ ಸಭೆ

ಉಡುಪಿ, ಡಿ.28: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಗ್ರಾಮ ವಾಸ್ತವ್ಯಕ್ಕಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ಅಧಿಕಾರಿಗಳ ಹಾಗೂ ಕೊರಗ ಸಮುದಾಯದ ಮುಖಂಡರ ಸಭೆ ನಡೆಸಿದರು.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಚಿವರ ಭೇಟಿ ವೇಳೆ ಜಿಲ್ಲೆಯ ಅತ್ಯಂತಹಿಂದುಳಿದ ಸಮುದಾಯದವರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿರಿಸಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕೊರಗರ ಪ್ರಮುಖ ಬೇಡಿಕೆಗಳ ಮನವಿಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಅವರ ಜನಸಂಖ್ಯೆ ಕುಂಠಿತಗೊಳ್ಳಲು ಮತ್ತು ಆರೋಗ್ಯ ಸಮಸ್ಯೆಯನ್ನು ಅಧ್ಯಯನ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಜೊತೆಯಲ್ಲಿ ಮಣಿಪಾಲದ ಸಮುದಾಯ ಆರೋಗ್ಯ ವಿಭಾಗದ ಸಹಕಾರದೊಂದಿಗೆ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ. ಕೊರಗರ ಪ್ರಮುಖ ಬೇಡಿಕೆಗಳ ಮನವಿಯನ್ನು ಈಗಾಗಲೇ ಪರಿಶೀಲಿಸ ಲಾಗಿದ್ದು, ಅವರ ಜನಸಂಖ್ಯೆ ಕುಂಠಿತಗೊಳ್ಳಲು ಮತ್ತು ಆರೋಗ್ಯ ಸಮಸ್ಯೆಯನ್ನು ಅಧ್ಯಯನ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಜೊತೆಯಲ್ಲಿ ಮಣಿಪಾಲದ ಸಮುದಾಯ ಆರೋಗ್ಯ ವಿಭಾಗದ ಸಹಕಾರದೊಂದಿಗೆ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ. ಇದೇ ಮಾದರಿಯಲ್ಲಿ ಶೈಕ್ಷಣಿಕ ಸಮಿತಿಯೊಂದನ್ನು ಕೊರಗ ಜನಾಂಗದ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ರಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿ ವರ್ಷಾಂತ್ಯವನ್ನು ಬುಡಕಟ್ಟು ಜನರ ಹಾಡಿ ಯಲ್ಲಿ ಕಳೆಯುತ್ತಿರುವ ಸಚಿವ ಹೆಚ್ ಆಂಜನೇಯ, ಇದೇ ಡಿ.31ರಂದು ಉಡುಪಿಯಿಂದ 80 ಕಿ.ಮಿ. ದೂರವಿರುವ ಕಾಲ್ತೋಡು ಗ್ರಾಪಂ ವ್ಯಾಪ್ತಿ ಯಲ್ಲಿರುವ ಮೂರೂರು ಕೊರಗರ ಹಾಡಿಯಲ್ಲಿ ಮರ್ಲಿ ಕೋಂ ಮರ್ಲ ಕೊರಗ ಎಂಬವರ ಮನೆಯಲ್ಲಿ ವಾಸ್ತವ್ಯ ಮಾಡಲಿರುವರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿ ವರ್ಷಾಂತ್ಯವನ್ನು ಬುಡಕಟ್ಟು ಜನರ ಹಾಡಿ ಯಲ್ಲಿ ಕಳೆಯುತ್ತಿರುವ ಸಚಿವ ಹೆಚ್ ಆಂಜನೇಯ, ಇದೇ ಡಿ.31ರಂದು ಉಡುಪಿಯಿಂದ 80 ಕಿ.ಮಿ. ದೂರವಿರುವ ಕಾಲ್ತೋಡು ಗ್ರಾಪಂ ವ್ಯಾಪ್ತಿ ಯಲ್ಲಿರುವ ಮೂರೂರು ಕೊರಗರ ಹಾಡಿಯಲ್ಲಿ ಮರ್ಲಿ ಕೋಂ ಮರ್ಲ ಕೊರಗ ಎಂಬವರ ಮನೆಯಲ್ಲಿ ವಾಸ್ತವ್ಯ ಮಾಡಲಿರುವರು. ಈ ಹಿನ್ನಲೆಯಲ್ಲಿ ಕೊರಗರ ಹಾಡಿಯ ಮೂಲಭೂತ ಅಗತ್ಯಗಳನ್ನು ಗುರುತಿಸಿ ಪರಿಹರಿಸಲು ಸಚಿವರೇ ಖುದ್ದು ಆಗಮಿಸುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಸಮಗ್ರವಾಗಿ ಹಾಗೂ ನಿರಂತರ ಪರಿಹಾರ ಗಮನದಲ್ಲಿರಿಸಿ ನೀಡಲು ಮನವಿಯನ್ನು ಕೊರಗ ಸಮುದಾಯದ ಪರವಾಗಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದರು.







