ಮನಪಾ ವಿರುದ್ಧ ಬಿಜೆಪಿ ಪ್ರತಿಭಟನೆ

ಮಂಗಳೂರು, ಡಿ.28: ಆಸ್ತಿ ಮತ್ತು ನೀರಿನ ತೆರಿಗೆ ಹೆಚ್ಚಳವನ್ನು ಖಂಡಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮತ್ತು ಉತ್ತರ ಮಂಡಲ ವತಿಯಿಂದ ಮನಪಾ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.
ಮನಪಾ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಮಾತನಾಡಿ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಿತ್ತು. ಇದೀಗ ಆಸ್ತಿ ತೆರಿಗೆ ಹೆಚ್ಚಿಸಿ ಮೇಯರ್ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರಕಾರದ ಅನುದಾನವನ್ನು ಮನಪಾ ಕಾಂಗ್ರೆಸ್ ಆಡಳಿತ ದುರುಪಯೋಗಪಡಿಸುತ್ತಿದೆ. ಅಮೃತ್ ಯೋಜನೆಯಲ್ಲಿ ಬಿಡುಗಡೆಯಾದ 55 ಕೋಟಿ ರೂ.ವನ್ನು ದುರಸ್ತಿ ಕಾಮಗಾರಿಗೆ ವಿನಿಯೋಗಿಸುತ್ತಿರುವುದು ಖಂಡನೀಯ ಎಂದು ರೂಪಾ ಡಿ. ಬಂಗೇರಾ ನುಡಿದರು.
ಮಾಜಿ ಸಚಿವ ಕೃಷ್ಣ ಪಾಲೆಮಾರ್, ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು.
ಉಪ ಮೇಯರ್ ಸುಮಿತ್ರಾ ಕರಿಯ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್, ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಉತ್ತರ ಮಂಡಲ ಅಧ್ಯಕ್ಷ ಡಾ. ಭರತ್ ಶೆಟ್ಟಿ, ಮುಖಂಡರಾದ ನಿತಿನ್ ಕುಮಾರ್, ಪೂಜಾ ಪೈ, ದೇವದಾಸ ಪ್ರಭು, ಕಾರ್ಪೋರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ, ನವೀನ್‌ಚಂದ್ರ, ವಿಜಯ ಕುಮಾರ್ ಶೆಟ್ಟಿ, ಪೂರ್ಣಿಮಾ, ಮೀರಾ ಕರ್ಕೇರಾ, ಜಯಂತಿ ಆಚಾರ್, ದಿವಾಕರ್, ಸುರೇಂದ್ರ ಭಾಗವಹಿಸಿದ್ದರು.







