ಹೊಸವರ್ಷ ಆಚರಣೆಗೆ ನಿರ್ಬಂಧ ಹೇರಲು ಮನವಿ

ಉಡುಪಿ, ಡಿ.28: ಡಿ. 31ರ ರಾತ್ರಿ ತೀರ್ಥಕ್ಷೇತ್ರ, ಪ್ರವಾಸಿತಾಣ, ಐತಿಹಾಸಿಕ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ ಹಾಗೂ ಪಾರ್ಟಿ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ತಪ್ಪುಆಚರಣೆಯ ಹಾನಿ ಯನ್ನು ತಿಳಿಸಿ ಸುಸಂಸ್ಕೃತವಾದ ಜೀವನದ ಮಹತ್ವ ತಿಳಿಸಬೇಕು. ಸರಕಾರ ದಿಂದ ರಾತ್ರಿ ಮದ್ಯದಂಗಡಿಗಳನ್ನು ತೆರೆದಿಡಲು ನೀಡಿದ ಅನುಮತಿ ರದ್ದು ಗೊಳಿಸಬೇಕು ಮತ್ತು ಅಬಕಾರಿ ಇಲಾಖೆಗೆ ಹೆಚ್ಚು ಮದ್ಯ ಮಾರಾಟ ಮಾಡುವ ಗುರಿಯನ್ನು ನೀಡಬಾರದು.
ಡಿ.31ಕ್ಕಿಂತ ಮೊದಲು ಪೊಲೀಸ್ ಠಾಣೆಯಿಂದ ಹೆಚ್ಚುವರಿ ಕಾವಲುಪಡೆ ಯನ್ನು ಆರಂಭಿಸಬೇಕು. ತಪ್ಪುಆಚರಣೆ ಮಾಡುವ ಯುವಕರನ್ನು ಬಂಧಿಸಬೇಕು. ತೀವ್ರ ವೇಗದಿಂದ ವಾಹನ ಚಲಾಯಿಸುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
Next Story





