ದುಬೈ: ಭಾರತೀಯ ಶಿಕ್ಷಕ ಆತ್ಮಹತ್ಯೆಗೆ ಶರಣು

ದುಬೈ,ಡಿ.28: ಭಾರತೀಯ ಶಿಕ್ಷಕರೊಬ್ಬರು ದುಬೈನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ರಾಜಸ್ಥಾನದ ಜೈಪುರದವರಾದ ಬೆಮಿನ್ ಫ್ಲಾಂಕ್ಲಿನ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಲಂಡನ್ ವಿವಿಯಲ್ಲಿ ಭಾಷಾ ಧ್ವನಿಶಾಸ್ತ್ರ (ಫೋನೆಟಿಕ್ಸ್)ನಲ್ಲಿ ಡಿಪ್ಲೊಮಾ ಗಳಿಸಿದ್ದರು.
ದುಬೈನ ಶಿಕ್ಷಣಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿದ್ದ ಬೆಂಜಮಿನ್ ದೃಷ್ಟಿಮಾಂಧ್ಯ ಹಾಗೂ ಅಂಗವಿಕಲ ಮಕ್ಕಳಿಗೂ ಶಿಕ್ಷಣ ನೀಡುತ್ತಿದ್ದರು.ಕಳೆದ ಕೆಲವು ದಿನಗಳಿಂದ ಅವರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲವೆಂದು ತಿಳಿದುಬಂದಿದೆ. ಬೆಂಜಮಿನ್ ಆತ್ಮಹತ್ಯೆಗೆ ಕಾರಣಗಳೇನೆಂಬ ಬಗ್ಗೆೆ ಪೊಲೀಸರು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಕವನಗಳನ್ನು ಬರೆಯುತ್ತಿದ್ದ ಬೆಂಜಮಿನ್, ಶಿಕ್ಷಕನಾಗಿ ತನ್ನ ಅನುಭವಗಳು ಹಾಗೂ ಏಶ್ಯನ್, ಅರಬ್, ಯುರೋಪಿಯನ್ ಮತ್ತಿತರ ಜನಾಂಗೀಯ ವಿದ್ಯಾರ್ಥಿಗಳ ಕುರಿತಾದ ಲೇಖನಗಳ ಸಂಕಲನವನ್ನು ಕೂಡಾ ಪ್ರಕಟಿಸಿದ್ದರು. ಬೆಂಜಮಿನ್ ಅವರ ಪುತ್ರಿ ಭಾರತದಲ್ಲಿ ವಾಸವಾಗಿದ್ದಾರೆ.





