ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ ಬೃಹತ್ ಮುನ್ನಡೆ
ಕ್ರೆಗ್ ಕುಕ್ ಶತಕ, ಎಲ್ಗರ್ ಅರ್ಧಶತಕ

ಪೋರ್ಟ್ ಎಲಿಜಬೆತ್, ಡಿ.28: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸ್ಟೀಫನ್ ಕ್ರೆಗ್ ಕುಕ್ ಶತಕ ಹಾಗೂ ಎಲ್ಗರ್ ಅರ್ಧಶತಕದ ಬೆಂಬಲದಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 432 ರನ್ ಮುನ್ನಡೆ ಸಾಧಿಸಿದೆ.
7 ವಿಕೆಟ್ ನಷ್ಟಕ್ಕೆ 181 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡ ಫಿಲ್ಯಾಂಡರ್(5-45) ಹಾಗೂ ಅಬಾಟ್(3-63)ದಾಳಿಗೆ ತತ್ತರಿಸಿ 205 ರನ್‌ಗೆ ಆಲೌಟಾಯಿತು.
81 ರನ್ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕ ತಂಡ 80 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿದ್ದು, ಒಟ್ಟಾರೆ 432 ರನ್ ಮುನ್ನಡೆಯಲ್ಲಿದೆ.
ಆಫ್ರಿಕದ ಪರ ಕುಕ್(117 ರನ್, 178 ಎಸೆತ, 11 ಬೌಂಡರಿ) ಹಾಗೂ ಎಲ್ಗರ್(52 ರನ್, 102 ಎಸೆತ, 4 ಬೌಂಡರಿ) ಮೊದಲ ವಿಕೆಟ್‌ಗೆ 116 ರನ್ ಸೇರಿಸಿ ಭರ್ಜರಿ ಆರಂಭ ನೀಡಿದರು. ಅಮ್ಲ 48 ರನ್‌ಗೆ ಔಟಾಗಿ ಅರ್ಧಶತಕ ವಂಚಿತರಾದರು. ಮೊದಲ ಇನಿಂಗ್ಸ್‌ನಲ್ಲಿ ಸರ್ವಾಧಿಕ ರನ್ ಬಾರಿಸಿದ್ದ ಡುಮಿನಿ 25 ರನ್ ಗಳಿಸಿ ಔಟಾದರು.
ನಾಯಕ ಎಫ್‌ಡು ಪ್ಲೆಸಿಸ್(41) ಹಾಗೂ ಕ್ವಿಂಟನ್ ಡಿಕಾಕ್(42) 6ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಸೇರಿಸಿದ್ದಾರೆ.
ಶ್ರೀಲಂಕಾದ ಪರ ಧನಂಜಯ್ ಡಿಸಿಲ್ವಾ 2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.
ಸಂಕ್ಷಿಪ್ತ ಸ್ಕೋರ್
ದ.ಆಫ್ರಿಕ ಮೊದಲ ಇನಿಂಗ್ಸ್: 286
ಶ್ರೀಲಂಕಾ ಮೊದಲ ಇನಿಂಗ್ಸ್: 205
(ಧನಂಜಯ್ ಡಿಸಿಲ್ವಾ 43, ಮ್ಯಾಥ್ಯೂಸ್ 39, ಫಿಲ್ಯಾಂಡರ್ 5-45, ಅಬಾಟ್ 3-63)
ದ.ಆಫ್ರಿಕ ಎರಡನೆ ಇನಿಂಗ್ಸ್: 351/5
(ಎಸ್‌ಸಿ ಕುಕ್ 117, ಎಲ್ಗರ್ 52, ಅಮ್ಲ 48, ಡಿಸಿಲ್ವ 2-34







