Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಸಿಂಧುವಿನಿಂದ ಅದಿತಿ ತನಕ... 2016 ಭಾರತದ...

ಸಿಂಧುವಿನಿಂದ ಅದಿತಿ ತನಕ... 2016 ಭಾರತದ ಮಹಿಳೆಯರ ವರ್ಷ

ವಾರ್ತಾಭಾರತಿವಾರ್ತಾಭಾರತಿ28 Dec 2016 11:31 PM IST
share
ಸಿಂಧುವಿನಿಂದ ಅದಿತಿ ತನಕ... 2016 ಭಾರತದ ಮಹಿಳೆಯರ ವರ್ಷ

ಹೊಸದಿಲ್ಲಿ, ಡಿ.28: ಭಾರತದ ಮಹಿಳಾ ಅಥ್ಲೀಟ್‌ಗಳು ಇದೇ ಮೊದಲ ಬಾರಿ 2016ರ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲಿಕ್ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದರು. ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ರಿಯೋ ಗೇಮ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ಎಲ್ಲರ ಹೃದಯ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ದೀಪಾ ಮಲಿಕ್ ಬೆಳ್ಳಿಯ ನಗೆ ಬೀರಿದ್ದರು. ಕನ್ನಡತಿ ಅದಿತಿ ಅಶೋಕ್ ಮಹಿಳೆಯರ ಗಾಲ್ಫ್‌ನಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಸಾನಿಯಾ ಮಿರ್ಝಾ ಸತತ 84 ವಾರಗಳ ಕಾಲ ಡಬ್ಲುಟಿಎ ಡಬಲ್ಸ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದರು. ನಿಜವಾಗಿಯೂ ಈ 6 ಮಹಿಳಾ ಅಥ್ಲೀಟ್‌ಗಳು ಈ ವರ್ಷ ಭಾರತೀಯ ಕ್ರೀಡೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಸಾಕ್ಷಿ ಮಲಿಕ್: ರಿಯೋ ಒಲಿಂಪಿಕ್ಸ್‌ನಲ್ಲಿ ಸುಮಾರು 2 ವಾರ ಪದಕ ಗೆಲ್ಲದೇ ಹತಾಶೆ, ನಿರಾಸೆಗೊಂಡಿದ್ದ ಭಾರತಕ್ಕೆ ಆ.18 ರಂದು ಆಶಾಕಿರಣವಾಗಿ ಗೋಚರಿಸಿದವರು ಸಾಕ್ಷಿ ಮಲಿಕ್. ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ ಸಾಕ್ಷಿ ಭಾರತದ ಪದಕದ ಬರ ನೀಗಿಸಿದ್ದರು. ಒಲಿಂಪಿಕ್ಸ್ ಪದಕ ಗಳಿಸಿದ ಭಾರತದ ಮೊದಲ ಮಹಿಳಾ ಕುಸ್ತಿ ಪಟು ಎನಿಸಿಕೊಂಡರು. 2014ರಲ್ಲಿ ಗ್ಲಾಸ್ಗೋ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ 2014ರ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ 23ರ ಪ್ರಾಯದ ಹರ್ಯಾಣದ ಸಾಕ್ಷಿ 1947ರಲ್ಲಿ ಭಾರತ ಸ್ವಾತಂತ್ರ ಪಡೆದ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 25ನೆ ಪದಕ ಗೆದ್ದುಕೊಟ್ಟರು.

ಪಿ.ವಿ ಸಿಂಧು: ಪದಕದ ನಿರೀಕ್ಷೆ ಮೂಡಿಸಿದ್ದ ಸೈನಾ ನೆಹ್ವಾಲ್ ರಿಯೋ ಗೇಮ್ಸ್‌ನಲ್ಲಿ 2ನೆ ಸುತ್ತಿನಲ್ಲಿ ನಿರ್ಗಮಿಸಿದಾಗ ಸಿಂಧು ಭಾರತದ ಬ್ಯಾಡ್ಮಿಂಟನ್‌ನೆ ಹೊಸ ಭರವಸೆಯಾಗಿ ಮೂಡಿಬಂದರು. ತನ್ನ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಯಿಹಾನ್ ವಾಂಗ್‌ರನ್ನು ಮಣಿಸಿ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ 2ನೆ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದರು. ಸೆಮಿಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು ನೇರ ಗೇಮ್‌ಗಳಿಂದ ಮಣಿಸಿದ್ದ ಸಿಂಧು ಒಲಿಂಪಿಕ್ಸ್ ಫೈನಲ್‌ಗೆ ತಲುಪಿದ ಭಾರತದ ಮೊದಲ ಶಟ್ಲರ್ ಎನಿಸಿಕೊಂಡಿದ್ದರು. ಫೈನಲ್‌ನಲ್ಲಿ ಸ್ಪೇನ್‌ನ ಕ್ಯಾರೊಲಿನಾ ಮರಿನ್‌ರ ವಿರುದ್ಧ ಸೋತ ಸಿಂಧು ಬೆಳ್ಳಿ ಪದಕ ಜಯಿಸಿ ಐಸಿಹಾಸಿಕ ಸಾಧನೆ ಮಾಡಿದ್ದರು. ವರ್ಷಾಂತ್ಯದಲ್ಲಿ ಮೊದಲ ಬಾರಿ ಚೀನಾ ಓಪನ್ ಪ್ರಶಸ್ತಿ ಜಯಿಸಿದ್ದ ಸಿಂಧು ಹಾಂಕಾಂಗ್ ಓಪನ್‌ನಲ್ಲಿ ಎರಡನೆ ಸ್ಥಾನ ಪಡೆದರು. ದುಬೈನಲ್ಲಿ ನಡೆದ ವರ್ಲ್ಡ್ ಸೂಪರ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.

ಎಲ್ಲರ ಹೃದಯ ಗೆದ್ದ ರಾಣಿ ದೀಪಾ: ಚೊಚ್ಚಲ ಒಲಿಂಪಿಕ್ಸ್ ಆಡಿದ್ದ ದೀಪಾ ಕರ್ಮಾಕರ್ 52 ವರ್ಷಗಳ ಬಳಿಕ ಬೇಸಿಗೆ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಮೊದಲ ಜಿಮ್ನಾಸ್ಟಿಕ್ ಎನಿಸಿಕೊಂಡರು. ಪ್ರೊಡುನೊವಾ ವಾಲ್ಟ್ ವಿಭಾಗದಲ್ಲಿ ಫೈನಲ್‌ಗೆ ತಲುಪಿದ್ದ ದೀಪಾ ನಾಲ್ಕನೆ ಸ್ಥಾನಪಡೆದಿದ್ದರು. ಕೇವಲ 0.150 ಅಂಕದಿಂದ ಕಂಚಿನ ಪದಕ ವಂಚಿತರಾಗಿದ್ದರು.

ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಿಂದ ಪದಕ ವಂಚಿತರಾಗಿದ್ದ ದೀಪಾ ಎಲ್ಲರ ಮನ ಗೆಲ್ಲಲು ಸಫಲರಾದರು. ಅವರು ಸ್ವದೇಶಕ್ಕೆ ವಾಪಸಾದ ಬಳಿಕ ಖೇಲ್‌ರತ್ನ ಪ್ರಶಸ್ತಿ ಸ್ವೀಕರಿಸಿದ್ದರು. ಅವರ ಕೋಚ್ ಬಿಶ್ವೇಶ್ವರ ನಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು.

 ಅಸಾಮಾನ್ಯ ಅಥ್ಲೀಟ್ ದೀಪಾ ಮಲಿಕ್: ವೀಲ್‌ಚೇರ್‌ನ ಮೂಲಕವೇ ಸ್ಪರ್ಧಿಸುತ್ತಿರುವ ಪ್ಯಾರಾಥ್ಲೀಟ್ ದೀಪಾ ಮಲಿಕ್ ಸೆ.12 ರಂದು ನಡೆದಿದ್ದ ಎಫ್-53 ಶಾಟ್‌ಪುಟ್ ಸ್ಪರ್ಧೆಯಲ್ಲಿ 4.61 ಮೀ. ದೂರ ಶಾಟ್‌ಪುಟ್‌ನ್ನು ಎಸೆದು ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಇತಿಹಾಸ ಬರೆದಿದ್ದರು. 1999ರಲ್ಲಿ ಬೆನ್ನಿನಲ್ಲಿ ಗಡ್ಡೆ ಕಾಣಿಸಿಕೊಂಡ ಕಾರಣ 3 ಬಾರಿ ಶಸ್ತ್ರಚಿಕಿತ್ಸೆ ಹಾಗೂ 183 ಹೊಲಿಗೆ ಹಾಕಿಕೊಂಡಿದ್ದ 45ರ ಪ್ರಾಯದ ದೀಪಾ ಮಲಿಕ್ ಎಲ್ಲ ನೋವನ್ನು ಮರೆತು ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿ ಅಂಗವೈಕಲ್ಯವನ್ನು ಮೆಟ್ಟಿ ನಿಂತಿದ್ದಾರೆ. ತನ್ನ ಮಹಾನ್ ಸಾಧನೆಗೆ 2012ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ದೀಪಾ ರಾಷ್ಟ್ರಮಟ್ಟದಲ್ಲಿ 54 ಚಿನ್ನದ ಪದಕ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಿಮ್ಮಿಂಗ್, ಜಾವೆಲಿನ್ ಎಸೆತ ಹಾಗೂ ಶಾಟ್‌ಪುಟ್‌ನಲ್ಲಿ 13 ಪದಕಗಳನ್ನು ಜಯಿಸಿದ್ದರು. ದೀಪಾ ರಾಜಸ್ಥಾನ ಮಹಿಳಾ ಕ್ರಿಕೆಟ್ ತಂಡದಲ್ಲೂ ಮಿಂಚಿದ್ದಾರೆ.

 ಭಾರತೀಯ ಗಾಲ್ಫ್‌ನ ಹೆಮ್ಮೆ ಅದಿತಿ ಅಶೋಕ್: 2016ರ ಒಲಿಂಪಿಕ್ಸ್‌ಗೆ ಮೊದಲು ಅದಿತಿ ಅಶೋಕ್ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಒಲಿಂಪಿಕ್ಸ್‌ನ 14 ದಿನ 18ರ ಹರೆಯದ ಭಾರತೀಯ ಗಾಲ್ಫರ್ ಅದಿತಿ ಗಾಲ್ಫ್ ಅಂಗಣಕ್ಕೆ ಇಳಿದಿದ್ದರು. ರಿಯೋ ಗೇಮ್ಸ್‌ನಲ್ಲಿ ಸ್ಪರ್ಧೆಯಲ್ಲಿದ್ದ ಅತ್ಯಂತ ಕಿರಿಯ ಗಾಲ್ಫರ್ ಅದಿತಿ ಒಂದು ಹಂತದಲ್ಲಿ 8ನೆ ಸ್ಥಾನದಲ್ಲಿ ಟೈ ಸಾಧಿಸಿದ್ದರು. ಅಂತಿಮವಾಗಿ 41ನೆ ಸ್ಥಾನ ಪಡೆದು ಮಿಂಚಿದ್ದರು.

ಒಲಿಂಪಿಕ್ಸ್‌ನಲ್ಲಿ ಪಡೆದ ಅನುಭವವನ್ನು ಸದುಪಯೋಪಡಿಸಿಕೊಂಡ ಅದಿತಿ ನವೆಂಬರ್‌ನಲ್ಲಿ ಲೇಡ್ ಯುರೋಪಿಯನ್ ಟೂರ್‌ನಲ್ಲಿ ಸತತವಾಗಿ ಇಂಡಿಯನ್ ಓಪನ್ ಹಾಗೂ ಕತರ್ ಓಪನ್ ಪ್ರಶಸ್ತಿ ಜಯಿಸಿದ ಮೊದಲ ಭಾರತೀಯ ಗಾಲ್ಫರ್ ಎನಿಸಿಕೊಂಡರು. ಈ ಎರಡು ಪ್ರಶಸ್ತಿ ಜಯಿಸಿ ಒಂದೇ ವಾರದಲ್ಲಿ ವಿಶ್ವ ರ್ಯಾಂಕಿಂಗ್‌ನಲ್ಲಿ 66ನೆ ಸ್ಥಾನಕ್ಕೆ ಜಿಗಿದಿದ್ದರು.

ಸಾನಿಯಾ ಮಿರ್ಝಾ: ಸಾನಿಯಾ ಮಿರ್ಝಾ ಸತತ 84 ವಾರಗಳ ಕಾಲ ಡಬ್ಲುಟಿಎ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡು ಮಹತ್ವದ ಸಾಧನೆ ಮಾಡಿದ್ದರು. ಯುಎಸ್ ಓಪನ್ ಬಳಿಕ ಡಬಲ್ಸ್ ಜೋಡಿ ಮಾರ್ಟಿನಾ ಹಿಂಗಿಸ್‌ರಿಂದ ಬೇರ್ಪಟ್ಟ ಹೊರತಾಗಿಯೂ ಬಾರ್ಬೊರ ಸ್ಟ್ರೀಕೊವಾರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದ ಸಾನಿಯಾ ಮೂರು ಟೂರ್ನಿಗಳನ್ನು ಜಯಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X