ಕುಮರಂಪುತ್ತೂರು ಉಸ್ತಾದ್ ಅನುಸ್ಮರಣೆ
ಮಂಗಳೂರು, ಡಿ.28: ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿ ಹಾಗೂ ಮಂಗಳೂರು, ಕಣ್ಣೂರು, ಮಂಗಳನಗರ, ಮುಡಿಪು, ದೇರಳಕಟ್ಟೆ ಕ್ಲಸ್ಟರ್ ಸಮಿತಿಗಳ ಆಶ್ರಯದಲ್ಲಿ ಡಿ.29ರಂದು ಸಂಜೆ 4ಕ್ಕೆ ಬಂದರ್ ಸಮಸ್ತ ಕಚೇರಿಯಲ್ಲಿ ಮೀಲಾದ್ ಕಾರ್ಯಕ್ರಮ ಹಾಗೂ ಕುಮರಂಪುತ್ತೂರು ಉಸ್ತಾದ್‌ರ ಅನುಸ್ಮರಣೆ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಇಬ್ರಾಹೀಂ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಖಾಝಿ ತ್ವಾಖಾ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶೇಕಬ್ಬ ಬಾಖವಿ ದುಆ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷ ಕೆ. ಎಲ್. ಉಮರ್ ದಾರಿಮಿ, ಇರ್ಷಾದ್ ಫೈಝಿ ಕುದ್ರೋಳಿ ಭಾಷಣ ಮಾಡಲಿದ್ದಾರೆ. ಬಂದರ್ ದರ್ಗಾ ಝಿಯಾರತ್‌ಗೆ ಖಾಝಿ ಉಸ್ತಾದ್ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





