‘ಸ್ಟಾರ್‌ವಾರ್ಸ್’ನ ಕ್ಯಾರಿಫಿಶರ್ ಇನ್ನಿಲ್ಲ
ಲಾಸ್ ಏಂಜಲೀಸ್,ಡಿ.28: ಸ್ಟಾರ್‌ವಾರ್ಸ್ ಖ್ಯಾತಿಯ ಹಿರಿಯ ಹಾಲಿವುಡ್ ನಟಿ ಕ್ಯಾರಿ ಫಿಶರ್ ಮಂಗಳವಾರ ನಿಧನರಾಗಿದ್ದಾರೆ.ಅವರಿಗೆ 60 ವರ್ಷ ವಯಸ್ಸಾಗಿತ್ತು. 1975ರಲ್ಲಿ ವಾರೆನ್ ಬೆಟ್ಟಿ ನಾಯಕನಾಗಿರುವ ‘ಶಾಂಪೂ’ ಚಿತ್ರದ ಮೂಲಕ ಕ್ಯಾರಿ ಫಿಶರ್ ಹಾಲಿವುಡ್ ಪ್ರವೇಶಿಸಿದ್ದರು. ಅವರ ಅಭಿನಯದ ಆಸ್ಟಿನ್ ಪವರ್ಸ್, ಬ್ಲೂ ಬ್ರದರ್ಸ್, ಚಾರ್ಲಿಸ್ ಏಂಜಲ್ಸ್, ಹನ್ನಾ ಆ್ಯಂಡ್ ಹರ್ ಸಿಸ್ಟರ್ಸ್,ಸ್ಕ್ರೀಮ್ 3 ಚಿತ್ರಗಳು ಅಪಾರ ಯಶಸ್ಸು ಕಂಡಿದ್ದವು. 1977ರಲ್ಲಿ ಬಿಡುಗಡೆಯಾದ ಸ್ಟಾರ್‌ವಾರ್ಸ್ ಚಿತ್ರದಲ್ಲಿ ರಾಜಕುಮಾರಿ ಲಿಯಾ ಪಾತ್ರವು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು.ರಂಗನಟಿಯಾಗಿಯೂ ಕ್ಯಾರಿ ಹೆಸರು ಗಳಿಸಿದ್ದರು. ಮಾದಕದ್ರವ್ಯ ವ್ಯಸನಿ ಹಾಗೂ ಮನೋರೋಗಿಯಾಗಿದ್ದ ಸಂದರ್ಭದಲ್ಲಿನ ತನ್ನ ಅನುಭವಗಳನ್ನು ಅವರು ಪುಸ್ತಕರೂಪದಲ್ಲಿ ಪ್ರಕಟಿಸಿದ್ದರು. ಕ್ಯಾರಿ ಫಿಶರ್ ಅವರು ಹಿರಿಯ ಹಾಲಿವುಡ್ ನಟಿ ಡೆಬ್ಬಿ ರೆನಾಲ್ಡ್ಸ್ ಹಾಗೂ ಪಾಪ್ ಗಾಯಕ ಎಡ್ಡಿ ಫಿಶರ್ ಅವರ ಪುತ್ರಿಯಾಗಿದ್ದಾರೆ.
Next Story





