ಏಮ್ಸ್ ನಿರ್ದೇಶಕರ ಆಯ್ಕೆ ಸಮಿತಿಯ ಪುನರ್‌ರಚನೆ
ಹೊಸದಿಲ್ಲಿ,ಡಿ,28: ಏಮ್ಸ್ ನಿರ್ದೇಶಕರ ಹುದ್ದೆಗೆ ಸೂಕ್ತ ಹೆಸರನ್ನು ಸೂಚಿಸುವ ಜವಾಬ್ದಾರಿಯನ್ನು ಹೊತ್ತಿರುವ ಶೋಧ ಮತ್ತು ಆಯ್ಕೆ ಸಮಿತಿಯನ್ನು ಪ್ರಧಾನಿ ಕಚೇರಿಯ ಆದೇಶದ ಮೇರೆಗೆ ಪುನರಚಿಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವರ ಬದಲು ಆರೋಗ್ಯ ಕಾರ್ಯದರ್ಶಿ ಸಿ.ಕೆ.ಮಿಶ್ರಾ ಅವರನ್ನು ಐವರು ನೂತನ ಸದಸ್ಯರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ.
ಸಮಿತಿಯ ಕೆಲವು ಸದಸ್ಯರು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದಾರೆಂಬ ಆರೋಪಗಳ ನಡುವೆಯೇ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಶಿಫಾರಸಿನ ಮೇರೆಗೆ ಪ್ರಧಾನಿ ಕಚೇರಿಯು ಸಮಿತಿಯ ಪುನರಚನೆಗೆ ಕಳೆದ ವಾರ ಆದೇಶಿಸಿತ್ತು.
ನಿಯಮಗಳಂತೆ ಸಮಿತಿಯು ಅಭ್ಯರ್ಥಿಗಳ ಪ್ಯೆಕಿ ಓರ್ವರನ್ನು ಆಯ್ಕೆ ಮಾಡಿ, ಅವರ ಹೆಸರನ್ನು ಅಂತಿಮ ಒಪ್ಪಿಗೆಗಾಗಿ ಪ್ರಧಾನಿ ಅಧ್ಯಕ್ಷತೆಯ ಸಂಪುಟದ ನೇಮಕಾತಿಗಳ ಸಮಿತಿಗೆ ಸಲ್ಲಿಸುತ್ತದೆ.
Next Story





