Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಬಿಜೆಪಿಯ ಬಳಸಿ ಎಸೆಯುವ ಚಾಳಿ

ಬಿಜೆಪಿಯ ಬಳಸಿ ಎಸೆಯುವ ಚಾಳಿ

ವಾರ್ತಾಭಾರತಿವಾರ್ತಾಭಾರತಿ29 Dec 2016 12:04 AM IST
share

ಕೇಂದ್ರ ಸರಕಾರಕ್ಕೂ ರಾಜ್ಯ ಸರಕಾರಕ್ಕೂ ಒಂದು ಸಣ್ಣ ಸಾಮ್ಯತೆ ಇದೆ. ಕೇಂದ್ರದಲ್ಲೂ ರಾಜ್ಯದಲ್ಲೂ ವಿರೋಧ ಪಕ್ಷಗಳು ನಿಷ್ಕ್ರಿಯವಾಗಿವೆ. ಕೇಂದ್ರ ಸರಕಾರದ ಅಪ್ರಬುದ್ಧ ಆಡಳಿತ ಇಡೀ ದೇಶದ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತಿದ್ದರೂ, ಅದನ್ನು ಮುಂದಿಟ್ಟು ಸರಕಾರವನ್ನು ಅಲುಗಾಡಿಸುವ ಗಟ್ಟಿ ನಾಯಕರು ವಿರೋಧ ಪಕ್ಷದಲ್ಲಿ ಇದ್ದಂತಿಲ್ಲ. ಬಹುಶಃ ಈ ದುರ್ಬಲ ವಿರೋಧ ಪಕ್ಷವೇ ಕೇಂದ್ರ ಸರಕಾರದ ಅತಿ ದೊಡ್ಡ ಶಕ್ತಿಯಾಗಿದೆ. ತನ್ನೆಲ್ಲ ವೈಫಲ್ಯಗಳನ್ನಿಟ್ಟು ಮೋದಿಯವರು ಇಂದಿಗೂ ಎದೆ ಉಬ್ಬಿಸಿ ಓಡಾಡುತ್ತಿದ್ದರೆ ಅದಕ್ಕೆ ಕಾರಣ ಈ ವಿರೋಧ ಪಕ್ಷಗಳು. ಇತ್ತ ಕರ್ನಾಟಕದಲ್ಲಿಯ ಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಭಿವೃದ್ಧಿಗೆ ಸಂಬಂಧಪಟ್ಟು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ವಿರೋಧ ಪಕ್ಷ ಬಿಜೆಪಿಯ ಚಕ್ರ ಭಿನ್ನಮತದ ಕೆಸರಲ್ಲಿ ಹೂತು ಹೋಗಿದೆ. ರಥವನ್ನು ಮುನ್ನಡೆಸಬೇಕಾದ ಸಾರಥಿಗೆ ರಥವನ್ನು ಮುಂದೆ ಸಾಗಿಸುವ ಉತ್ಸಾಹವೇ ಕಾಣುತ್ತಿಲ್ಲ.

ಯಡಿಯೂರಪ್ಪ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾದಾಕ್ಷಣ ಪಕ್ಷದೊಳಗೆ ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತಾದರೂ ಅಂತಹ ಯಾವುದೇ ಸುಧಾರಣೆಗಳು ಬಿಜೆಪಿಯೊಳಗೆ ಕಂಡು ಬರುತ್ತಿಲ್ಲ. ಯಡಿಯೂರಪ್ಪರ ಸ್ಥಿತಿ ತೆನಾಲಿ ರಾಮಕೃಷ್ಣನ ಬೆಕ್ಕಿನಂತಾಗಿದೆ. ಒಮ್ಮೆ ಬಿಸಿ ಹಾಲು ಕುಡಿದು ನಾಲಗೆ ಸುಟ್ಟುಕೊಂಡಿರುವ ಯಡಿಯೂರಪ್ಪ, ಇದೀಗ ಬಿಜೆಪಿಯ ಅಧಿಕಾರದ ಹಾಲನ್ನು ಅನುಮಾನದಿಂದ ನೋಡುತ್ತಿದ್ದಾರೆ. ತನ್ನನ್ನು ಪಕ್ಷಾಧ್ಯಕ್ಷನಾಗಿಸಿ, ಬಿಜೆಪಿಯನ್ನು ಅಧಿಕಾರಕ್ಕೇರಿಸಲು ತನ್ನನ್ನು ಬಳಸಿ ಬಳಿಕ ಹಿಂದಿನಂತೆಯೇ ಕಸದ ತೊಟ್ಟಿಗೆ ಎಸೆಯುವ ಭಯ ಅವರನ್ನು ಕಾಡುತ್ತಿದೆ. ಅವರ ಸುತ್ತಮುತ್ತಲಿರುವ ಜಗದೀಶ್ ಶೆಟ್ಟರ್, ಅಶೋಕ್, ಈಶ್ವರಪ್ಪ, ಅನಂತಕುಮಾರ್ ಮೊದಲಾದ ನಾಯಕರೆಲ್ಲ ಆಳದಲ್ಲಿ ಯಡಿಯೂರಪ್ಪ ಕುರಿತಂತೆ ಅಸಮಾಧಾನವನ್ನು ಹೊಂದಿದವರೇ ಆಗಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಬೆನ್ನಿಗೆ ಚೂರಿ ಹಾಕುವುದರಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಇತ್ತೀಚೆಗೆ ಬಿಜೆಪಿ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಈ ನಾಯಕರೆಲ್ಲ ಒಂದಾಗಿ ಭುಸುಗುಟ್ಟಿದ್ದರು. ಇದಾದ ಬೆನ್ನಿಗೇ ಈಶ್ವರಪ್ಪ ಅವರು ಹಿಂದುಳಿದ ವರ್ಗ ಮತ್ತು ದಲಿತರನ್ನು ಸಂಘಟಿಸಿ ‘ರಾಯಣ್ಣ ಬ್ರಿಗೇಡ್’ ಕಟ್ಟಿದರು. ಯಾವಾಗ ಬ್ರಿಗೇಡ್ ಕಟ್ಟಿದರೋ, ಅಲ್ಲಿಂದ ಬಿಜೆಪಿಯ ರಥದ ಚಕ್ರ ಭಿನ್ನಮತದ ಕೆಸರಿನ ಆಳಕ್ಕಿಳಿದಿದೆ. ಒಂದು ಚಕ್ರವನ್ನೇ ಬದಲಿಸದಿದ್ದಲ್ಲಿ ರಥ ಮುಂದೆ ಹೋಗುವುದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈಶ್ವರಪ್ಪ ರಾಜ್ಯ ಬಿಜೆಪಿಯ ಪಾಲಿಗೆ ಗಂಟಲ ಮುಳ್ಳು. ಇಂದು ಶೂದ್ರವರ್ಗದ ಪ್ರಮುಖ ನಾಯಕರೆಂದು ಬಿಜೆಪಿಯಲ್ಲಿರುವುದು ಈಶ್ವರಪ್ಪ ಅವರು ಮಾತ್ರ. ಸಂಘಪರಿವಾರ ತನ್ನ ಅಜೆಂಡಾಗಳನ್ನು ಶೂದ್ರವರ್ಗಕ್ಕೆ ದಾಟಿಸುವುದಕ್ಕೆ ಸದಾ ಈಶರಪ್ಪ, ಸಿ.ಟಿ. ರವಿ, ಸುನೀಲ್ ಕುಮಾರ್ ಮೊದಲಾದ ಶೂದ್ರವರ್ಗದ ನಾಯಕರನ್ನೇ ಬಳಸಿಕೊಂಡು ಬಂದಿದೆ. ಇಂದಿಗೂ ಬ್ರಾಹ್ಮಣ ಸಮಾಜದಿಂದ ಬಂದಿರುವ ವಿ. ಎಸ್. ಆಚಾರ್ಯ, ಸುರೇಶ್‌ಕುಮಾರ್ ಮೊದಲಾದ ಆರೆಸ್ಸೆಸ್ ಹಿನ್ನೆಲೆಯ ನಾಯಕರು ‘ಸಜ್ಜನ ರಾಜಕಾರಣಿ’ ಎಂಬ ಬಿರುದನ್ನು ಕಾಪಾಡಿಕೊಂಡೇ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಶೂದ್ರವರ್ಗದಿಂದ ಬಂದಿರುವ ಈ ನಾಯಕರು ತಮ್ಮ ‘ಹಿಂದುತ್ವ’ವನ್ನು ನಾಯಕರಿಗೆ ಸಾಬೀತು ಪಡಿಸುವುದಕ್ಕಾಗಿ ಆಗಾಗ ಸಾರ್ವಜನಿಕವಾಗಿ ದ್ವೇಷ ಭಾಷಣಗಳನ್ನು ಮಾಡಬೇಕಾದಂತಹ ಅನಿವಾರ್ಯ ಸ್ಥಿತಿ ಇದೆ. ಬಿಜೆಪಿಯೊಳಗೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಬೇಕಾದರೆ ಅವರಿಗಿದು ಅನಿವಾರ್ಯ. ಆರೆಸ್ಸೆಸ್ ಅಜೆಂಡಾಗಳನ್ನು ಜಾರಿಗೊಳಿಸುವ ಭಾಗವಾಗಿ ಬಿಜೆಪಿಯಲ್ಲಿ ಕ್ರಿಮಿನಲ್ ಕೇಸುಗಳನ್ನು ಜಡಿದುಕೊಂಡ ನಾಯಕರ ಪಟ್ಟಿಯನ್ನು ನೋಡಿದರೆ ಅದರಲ್ಲಿ ಈ ಶೂದ್ರ ನಾಯಕರೇ ಅಧಿಕ.

ಆರೆಸ್ಸೆಸ್ ಹಾಲು ಕುಡಿದು ಬೆಳೆದಿರುವ ಸುರೇಶ್ ಕುಮಾರ್‌ರಂಥವರು ಸಜ್ಜನರೆಂದು ಬಣ್ಣಿಸಲ್ಪಡುತ್ತಿರುವಾಗ, ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರು ಜನರ ಕಣ್ಣಲ್ಲಿ ಸಂಸ್ಕಾರವಿಲ್ಲದ, ಸಜ್ಜನಿಕೆಯಿಲ್ಲದ, ಅವಿವೇಕಿ ನಾಯಕರಾಗಿ ಗುರುತಿಸಲ್ಪಡುತ್ತಿದ್ದಾರೆ ಮತ್ತು ಇಂಥ ನಾಯಕರನ್ನು ವರಿಷ್ಠರು ಈ ಹಿಂದೆ ಬಳಸಿ ಎಸೆದಿರುವುದೇ ಹೆಚ್ಚು. ಹಾಗೆ ಬಳಸಿ ಎಸೆಯಲ್ಪಡುತ್ತಿರುವವರ ಸಾಲಲ್ಲಿ ಈಗ ಈಶ್ವರಪ್ಪ ಸೇರಿದ್ದಾರೆ. ಇದನ್ನು ಅರಿತುಕೊಂಡ ಈಶ್ವರಪ್ಪ, ಬಿಜೆಪಿಯೊಳಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೋಸುಗ ಪ್ರತಿ ತಂತ್ರವನ್ನು ಹೂಡಿದ್ದಾರೆ. ಬಿಜೆಪಿಯ ಹಿಂದುತ್ವಕ್ಕೆ ಪ್ರತಿಯಾಗಿ, ಬಿಜೆಪಿಯೊಳಗಿರುವ ಹಿಂದುಳಿದ ವರ್ಗ ಮತ್ತು ದಲಿತರನ್ನು ಸಂಘಟಿಸಿ ಅದರೊಳಗಿರುವ ಬ್ರಾಹ್ಮಣ್ಯ ಶಕ್ತಿಗಳಿಗೆ ಪ್ರತಿ ಸವಾಲು ಹಾಕಲು ಮುಂದಾಗಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಮಾಡಿರುವ ತಂತ್ರವನ್ನೇ ಇಂದು ಬಿಜೆಪಿಯೊಳಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈಶ್ವರಪ್ಪ ಪ್ರಯೋಗಿಸಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿರುವ ಈಶ್ವರಪ್ಪ, ‘ರಾಯಣ್ಣ ಬ್ರಿಗೇಡ್’ ಮೂಲಕ ಬಿಜೆಪಿಯೊಳಗಿರುವ ದಲಿತ, ಹಿಂದುಳಿದ ವರ್ಗದ ಜನರ ನಾಯಕರಾಗುವುದಕ್ಕೆ ಹೊರಟಿರುವುದು ಯಡಿಯೂರಪ್ಪ ಅವರಿಗೆ ಬಹುದೊಡ್ಡ ಸವಾಲಾಗಿದೆ.

ಈಶ್ವರಪ್ಪ ಅವರು ‘ರಾಯಣ್ಣ ಬ್ರಿಗೇಡ್’ ಕಟ್ಟುವ ಮೂಲಕ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಯಡಿಯೂರಪ್ಪ ವರಿಷ್ಠರಿಗೆ ದೂರು ನೀಡಿದ್ದಾರೆ. ರಾಯಣ್ಣ ಬ್ರಿಗೇಡ್ ಬರ್ಖಾಸ್ತು ಆಗದೇ ಇದ್ದರೆ ತಾನು ಬೀದಿಗಿಳಿದು ಕೆಲಸ ಮಾಡುವುದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ಆದರೆ ರಾಯಣ್ಣ ಬ್ರಿಗೇಡ್ ಬರ್ಖಾಸ್ತಾದರೆ ಈಶ್ವರಪ್ಪ ಅವರೂ ಪರೋಕ್ಷವಾಗಿ ಬಿಜೆಪಿಯೊಳಗೆ ನೆಲೆಕಳೆದುಕೊಂಡಂತೆ. ಬಿಜೆಪಿಯೊಳಗೆ ಜಾತಿಯ ಹೆಸರಲ್ಲಿ ಸಂಘಟನೆಯಾಗಬಾರದು ಎನ್ನುವುದು ಯಡಿಯೂರಪ್ಪ ಅವರ ಪ್ರತಿಪಾದನೆ. ಆದರೆ, ಬಿಜೆಪಿಯೊಳಗೆ ಜಾತಿ ರಾಜಕಾರಣ ಇಲ್ಲವೇ ಎಂಬ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸುವುದು ಕಷ್ಟ. ಇಂದು ಯಡಿಯೂರಪ್ಪ ಅವರು ಬಿಜೆಪಿಯ ನಾಯಕತ್ವದ ತುತ್ತತುದಿಯಲ್ಲಿದ್ದರೆ ಲಿಂಗಾಯತ ಸಮುದಾಯದ ಪ್ರಾಬಲ್ಯವೇ ಅದಕ್ಕೆ ಕಾರಣ. ಈ ಜಾತಿಯ ಶಕ್ತಿಯನ್ನಿಟ್ಟುಕೊಂಡೇ ಅವರು ಬಿಜೆಪಿಯ ವರಿಷ್ಠರನ್ನು ಸೂತ್ರದೊಳಗೆ ಇಟ್ಟುಕೊಂಡಿದ್ದಾರೆ. ಅನಂತಕುಮಾರ್ ಅವರು ಇಂದು ರಾಷ್ಟ್ರಮಟ್ಟದಲ್ಲಿ ರಾಜಕೀಯ ನಾಯಕರಾಗಿ ಮಿಂಚುತ್ತಿದ್ದರೆ, ಆರೆಸ್ಸೆಸ್‌ನ ಪಾಲಿಗೆ ಅವರಿನ್ನೂ ಮುದ್ದಿನ ಕೂಸಾಗಿದ್ದಿದ್ದರೆ ಅದಕ್ಕೆ ಕಾರಣ ಅವರ ಜಾತಿಯೇ ಆಗಿದೆ.

ಬಿಜೆಪಿಯ ಹಿಂದುತ್ವವೆಂದರೆ ಆಳದಲ್ಲಿ ಅದು ವೈದಿಕ ರಾಜಕಾರಣವೇ ಆಗಿದೆ. ಬ್ರಾಹ್ಮಣ ಜಾತಿ ಅತ್ಯಂತ ಸಣ್ಣ ಸಂಖ್ಯೆ ಹೊಂದಿದ್ದರೂ, ಆ ಸಮುದಾಯದ ಹಲವು ನಾಯಕರು ಬಿಜೆಪಿಯೊಳಗೆ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದರೆ ಅದಕ್ಕೆ ಕಾರಣ ಜಾತಿ ಪ್ರಾಬಲ್ಯವೇ ಆಗಿದೆ. ಎಲ್ಲರೂ ತಮ್ಮ ತಮ್ಮ ಜಾತಿ, ಸ್ವಾಮೀಜಿಗಳ ಶಕ್ತಿಯನ್ನು ಮುಂದಿಟ್ಟುಕೊಂಡು ಬಿಜೆಪಿಯೊಳಗೆ ತಮ್ಮ ಬೇರನ್ನು ಗಟ್ಟಿ ಮಾಡಿಕೊಳ್ಳಬಹುದಾದರೆ, ಈಶ್ವರಪ್ಪ ದುರ್ಬಲ ಜಾತಿಯನ್ನು ಯಾಕೆ ಪಕ್ಷದೊಳಗೆ ಸಂಘಟಿಸಬಾರದು? ದುರ್ಬಲ ಜಾತಿಗಳನ್ನು ಪಕ್ಷದೊಳಗೆ ಸಂಘಟಿಸಿ ಒಂದಾಗಿಸಿದರೆ ಅದರ ಲಾಭ ಪರೋಕ್ಷವಾಗಿ ಬಿಜೆಪಿಗೇ ತಾನೆ? ಬಿಜೆಪಿಯೊಳಗೆ ಹಿಂದುಳಿದ ವರ್ಗದ ಜನರು ಸಂಘಟಿತರಾದರೆ, ಅದರೊಳಗಿರುವ ಮೇಲ್‌ಜಾತಿಯ ನಾಯಕರ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ‘ರಾಯಣ್ಣ’ನ ಮೇಲೆ ಬಿಜೆಪಿ ವರಿಷ್ಠರು ಯುದ್ಧ ಹೂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

  ಈಶ್ವರಪ್ಪ-ಯಡಿಯೂರಪ್ಪ ತಿಕ್ಕಾಟದಲ್ಲಿ, ಬಿಜೆಪಿಯೊಳಗೆ ಹಿಂದುಳಿದವರ್ಗದ ನಾಯಕರ ಸ್ಥಾನ ಏನು ಎನ್ನುವುದು ಬಯಲಾಗಿದೆ. ಎಲ್ಲಿಯವರೆಗೆ ಹಿಂದುಳಿದ ವರ್ಗದ ನಾಯಕರು ಮೇಲ್‌ಜಾತಿಯ ನಾಯಕರ ನಾಯಕತ್ವವನ್ನು ಒಪ್ಪಿಕೊಂಡು, ಅವರಿಗೆ ತಲೆಬಾಗುತ್ತಾ ಮುಂದುವರಿಯುತ್ತಾರೆಯೋ ಅಲ್ಲಿಯವರೆಗೆ ಅವರ ನೆಲೆ ಬಿಜೆಪಿಯಲ್ಲಿ ಭದ್ರವಾಗಿರುತ್ತದೆ. ಮೇಲ್‌ಜಾತಿಯ ನಾಯಕರನ್ನು ಪಕ್ಕಕ್ಕೆ ಸರಿಸಿ, ಹಿಂದುಳಿದವರ್ಗದ ಶಕ್ತಿಯನ್ನು ಬಳಸಿ ತಾವೇ ನಾಯಕರಾಗಲು ಹೊರಟಾಗ ಅವರು ಬಿಜೆಪಿಯ ಶತ್ರುವಾಗಿ ಬಿಂಬಿತವಾಗುತ್ತಾರೆ. ಸದ್ಯಕ್ಕೆ ಈಶ್ವರಪ್ಪ ಅಂತಹದೊಂದು ಸಾಹಸಕ್ಕಿಳಿದು ಬಿಜೆಪಿಯೊಳಗಿಂದ ಕಸದ ತೊಟ್ಟಿಗೆ ವರ್ಗಾವಣೆಯಾಗುವ ಸಿದ್ಧತೆಯಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X