ಮುಲ್ಕಿಯಲ್ಲಿ ವ್ಯಾಪಕ ಮಲೇರಿಯಾ

ಮುಲ್ಕಿ, ಡಿ.28: ಇಲ್ಲಿನ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕ ಮಲೇರಿಯಾ ಕಾಣಿಸಿಕೊಂಡಿದ್ದು ಕಳೆದ ನ.26 ರಿಂದ ಡಿ.25ರ ವರೆಗೆ ಸುಮಾರು 43 ಮಂದಿಗೆ ಮಲೇರಿಯಾ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಸರಕಾರಿ ಆಸ್ಪತ್ರೆಯ ಮೂಲಗಳು ತಿಳಿಸಿದೆ.
ಈ ಆಭಾಗದಲ್ಲಿ ಈ ಅವಧಿಯಲ್ಲಿ 310 ಶಂಕಿತ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. ಸುಡು ಬಿಸಿಲಿನ ಈ ವೇಳೆಯೂ ಅತ್ಯಧಿಕ ಮಲೇರಿಯಾ ಪ್ರಕರಣಗಳು ಕಂಡು ಬಂದಿರುವ ಬಗ್ಗೆ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ಮಲೇರಿಯಾ ನಿಯಂತ್ರಣಕ್ಕೆ ಒತ್ತಾಯಿಸಿದ್ದಾರೆ.
ಮಲೇರಿಯಾ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ಮೂವರು ಸರಕಾರಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಕೆ.ಎಸ್. ರಾವ್ ನಗರದ ಬಿಜಾಪುರ ಕಾಲನಿಯ ನಿವಾಸಿಗಳಾದ ಸುರೇಶ(40), ಮಾರುತಿ(11), ಕಮಲ(80) ಆಸ್ಪತ್ರೆಯಲ್ಲಿ ದಾಖಲಾದವರು.
ಮುಲ್ಕಿ ಬಪ್ಪನಾಡು ಬಳಿಯ ನೇಚರ್ ಟೆಂಪಲ್ ಪಾರ್ಕ್ ಹಾಗೂ ಕೆ.ಎಸ್.ರಾವ್ ನಗರದ ಬಿಜಾಪುರ ಕಾಲನಿಯ ಒಳಚರಂಡಿ ಅವ್ಯವಸ್ಥೆಯಿಂದ ಮಲೇರಿಯಾ ವ್ಯಾಪಕವಾಗಿ ಹರಡುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
Next Story





