ಮುಖೇಶ್ ಅಂಬಾನಿ 8.5 ಕೋಟಿ ರೂ. ನ ಬಿಎಂಡಬ್ಲ್ಯು ಕಾರಿನಲ್ಲಿ ಅಂಥದ್ದೇನಿದೆ?

ಭಾರತದ ಅತ್ಯಂತ ಶ್ರೀಮಂತ ವ್ಕಕ್ತಿ ಮುಖೇಶ್ ಅಂಬಾನಿ ಕೇವಲ ಅತ್ಯಂತ ದುಬಾರಿ ಮನೆಯಲ್ಲಿ ವಾಸಿಸುವುದು ಮಾತ್ರವಲ್ಲ; ಅವರ ಪ್ರಯಾಣ ಕೂಡಾ ಅತ್ಯಂತ ದುಬಾರಿ ಕಾರಿನಲ್ಲಿ. ಅಂಬಾನಿ ತಮ್ಮ ಬಿಎಂಡಬ್ಲ್ಯು760ಎಲ್‌ಐ ಕಾರಿನಲ್ಲಿ ಓಡಾಡುತ್ತಾರೆ.
ಇದು ಭಾರತದ ಅತ್ಯಂತ ದುಬಾರಿ ಕಾರು. ಇದು 8.5 ಕೋಟಿ ರೂಪಾಯಿ ಬೆಲೆಬಾಳಬೇಕು ಎಂದರೆ ಅಂಥದ್ದೇನು ವಿಶೇಷ ಎಂಬ ಕುತೂಹಲ ಸಹಜವಲ್ಲವೇ?
► ಇದು ವಿಆರ್7 ಸಿಡಿತಲೆ ಕ್ಷಿಪಣಿ ನಿರೋಧಕ ಸಾಮರ್ಥ್ಯ ಹೊಂದಿದೆ. ಇದರ ಒಳಗೆ ಡೋರ್ ಪ್ಯಾನಲ್‌ಗೆ ಕೇವ್ಲರ್ ಪ್ಲೇಟ್ ಅಳವಡಿಸಲಾಗಿದೆ. ಪ್ರತೀ ಕಿಟಕಿ ಗಾಜು ಕೂಡಾ ಗುಂಡು ನಿರೋಧಕವಾಗಿದ್ದು 65ಎಂಎಂ ದಪ್ಪ ಇದೆ. ಪ್ರತಿ ಕಿಟಕಿಯ ತೂಕವೇ 150 ಕೆ.ಜಿ.
►ಇದು ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರ, ಕೈಬಾಂಬ್, 17 ಕಿಲೋಮೀಟರ್‌ವರೆಗಿನ ಟಿಎನ್‌ಟಿ ಸ್ಫೋಟ ತಡೆದುಕೊಳ್ಳಬಲ್ಲದು. ನೆಲಬಾಂಬ್ ವಿರುದ್ಧವೂ ಇದನ್ನು ಪರೀಕ್ಷಿಸಲಾಗಿದೆ.
►ಇದರ ಇಂಧನ ಟ್ಯಾಂಕ್ ಸ್ವಯಂ ಸೀಲಿಂಗ್ ಕೆಲ್ವರ್ ಹೊಂದಿದ್ದು, ಇದಕ್ಕೆ ಬೆಂಕಿ ತಗುಲುವುದಿಲ್ಲ. ಈ ಕಾರು ರಾಸಾಯನಿಕ ದಾಳಿ ಪರಿಸ್ಥಿತಿಯನ್ನೂ ನಿರ್ವಹಿಸಬಲ್ಲದು. ತುರ್ತು ಅಗತ್ಯಕ್ಕಾಗಿ ಕಾರಿನ ಒಳಗೆ ಆಮ್ಲಜನಕ ದಾಸ್ತಾನು ಮಾಡಲಾಗಿದೆ.
► ಇದರ ಚಕ್ರದತ್ತ ನೋಟ ಹರಿಸಿದರೆ, ಎರಡು ಪದರದ ಟೈರ್ ಇದರ ವಿಶೇಷ. ಇದು ಕೂಡಾ ಗುಂಡಿನ ದಾಳಿಯನ್ನೂ ತಡೆದುಕೊಳ್ಳಬಲ್ಲದು.
► ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಇದಕ್ಕೆ ವಿ12-6.0 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, 533 ಬಿಎಚ್‌ಪಿ ಶಕ್ತಿ ಉತ್ಪಾದಿಸಬಲ್ಲದು. ಇದನ್ನು ಉಪಗ್ರಹ ಮೂಲಕ ಟ್ರ್ಯಾಕ್ ಮಾಡಲು ಸಾಧ್ಯ.
![]()
![]()
![]()
![]()







