ಭಾಷಾ ಅಲ್ಪಸಂಖ್ಯಾತ ಪ್ರದೇಶಕ್ಕೆ ಮಲಯಾಳ ಕಡ್ಡಾಯ ಆದೇಶ ವಿನಾಯಿತಿಗೆ ಆಗ್ರಹಿಸಿ ಧರಣಿ

ಕಾಸರಗೋಡು, ಡಿ.29: ಭಾಷಾ ಅಲ್ಪಾಸಂಖ್ಯಾತರ ಸಂವಿಧಾನ ಬದ್ದ ಹಕ್ಕನ್ನು ಕಸಿಯುವ ಹುನ್ನಾರವನ್ನು ಪ್ರತಿಭಟಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ಬೆಳಗ್ಗೆ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಇದಕ್ಕೆ ಮೊದಲು ಕೈಕಂಬದಿಂದ ಹೊರಟ ಮೆರವಣಿಗೆ ತಾಲೂಕು ಕಚೇರಿ ಬಳಿ ಕೊನೆಗೊಂಡಿತು. ಬಳಿಕ ಧರಣಿ ಸತ್ಯಾಗ್ರಹ ನಡೆಯಿತು.
ಜಿಲ್ಲೆಯ ಭಾಷ ಅಲ್ಪಸಂಖ್ಯಾತರ ಹಕ್ಕುಗಳು ಕಸಿದುಕೊಳ್ಳಲು ಜಿಲ್ಲಾಡಳಿತ ಮತ್ತು ಸರಕಾರ ಯತ್ನಿಸುತ್ತಿದ್ದು ಇದರ ವಿರುದ್ಧ ಕನ್ನಡಿಗರು ತೀವ್ರ ಹೋರಾಟ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದರು.
ಭಾಷಾ ಅಲ್ಪಸಂಖ್ಯಾತ ರ ನೆರವಿಗಾಗಿ ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅರ್ಜಿ ನಮೂನೆ , ಸುತ್ತೋಲೆಗಳನ್ನು ಕನ್ನಡದಲ್ಲಿಯೇ ನೀಡಬೇಕು , ಕನ್ನಡಿಗರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು, ಮಲಯಾಳ ಕಡ್ಡಾಯ ಆದೇಶದಿಂದ ಭಾಷಾ ಅಲ್ಪಸಂಖ್ಯಾತ ಪ್ರದೇಶಕ್ಕೆ ವಿನಾಯಿತಿ ನೀಡಬೇಕು, ಜಿಲ್ಲೆಯಲ್ಲಿ ಕನ್ನಡ ಸೆಲ್ ಆರಂಭಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಡೆಸಲಾಯಿತು





