ಬೇನಾಮಿ ಆಸ್ತಿ ಎಂದರೇನು ?
ನಿಮಗೆ ಗೊತ್ತಿರಬೇಕಾದ ನಾಲ್ಕು ಮಾಹಿತಿಗಳು

ಮುಂಬೈ, ಡಿ.29 : ನೋಟು ಅಮಾನ್ಯೀಕರಣದ ನಂತರ ಕೇಂದ್ರ ಸರಕಾರ ಕಾಳಧನ ನಿಯಂತ್ರಿಸಲು ಬೇನಾಮಿ ಆಸ್ತಿಗಳ ಮೇಲೆ ಕಣ್ಣಿಟ್ಟಿದೆ. ನಿಯಮಗಳನ್ನು ಉಲ್ಲಂಘಿಸಿ ಆಸ್ತಿ ಖರೀದಿಸಿದವರಿಗೆ ಇದರಿಂದಾಗಿ ಕಷ್ಟದ ದಿನಗಳು ಎದುರಾಗುವುದು ನಿಶ್ಚಿತ.
ಬೇನಾಮಿ ಆಸ್ತಿ ವ್ಯವಹಾರ ಕಾಯ್ದೆ 2016- ಇದು ಬೇನಾಮಿ ಆಸ್ತಿ ವ್ಯವಹಾರ ಕಾಯ್ದೆ 1988 ಇದಕ್ಕೆಮತ್ತಷ್ಟು ತಿದ್ದುಪಡಿ ತಂದಿದೆಯಲ್ಲದೆ ಅದನ್ನುಬೇನಾಮಿ ಆಸ್ತಿ ವ್ಯವಹಾರ ನಿಷೇಧ ಕಾಯ್ದೆ 1988 ಎಂದು ಪುನರ್ ನಾಮಕರಣ ಮಾಡಿದೆ. ಈ ತಿದ್ದುಪಡಿ ನವೆಂಬರ್ 1, 2016ರಂದು ಜಾರಿಗೆ ಬಂದಿದೆ.
ಬೇನಾಮಿ ಕಾಯ್ದೆ ಎಂದರೇನು ?
ವ್ಯಕ್ತಿಯೊಬ್ಬ ತನ್ನ ಹೆಸರಿನಲ್ಲಿ ಆಸ್ತಿ ಖರೀದಿಸದೆ ಇತರರ ಹೆಸರಿನಲ್ಲಿ ಅದನ್ನು ಖರೀದಿಸಿದಲ್ಲಿ ಆತನನ್ನು‘‘ಬೇನಾಮ್ದಾರ್"’ ಎಂದು ಕರೆಯಲಾಗುವುದು ಹಾಗೂ ಇಂತಹ ಆಸ್ತಿಗಳನ್ನು ‘‘ಬೇನಾಮಿ ಆಸ್ತಿ’’ ಎನ್ನಲಾಗುವುದು ಎಂದು ಭಾರತ ಸರಕಾರದ ಈ ಕಾಯ್ದೆ ಹೇಳುತ್ತದೆ.
ಈ ಕಾಯ್ದೆಯಡಿ ತಪ್ಪಿತಸ್ಥರ ವಿರುದ್ಧ ಯಾವ ಪ್ರಕರಣಗಳನ್ನು ದಾಖಲಿಸಲಾಗುವುದು ?
ಆಸ್ತಿಯೊಂದರ ನಿಜವಾದ ಒಡೆಯರಾಗಿದ್ದುಕೊಂಡರೂ ಅದನ್ನು ನಕಲಿ ಹೆಸರು ಯಾ ಬೇರೆಯವರ ಹೆಸರಿನಲ್ಲಿ ಖರೀದಿಸಿದವರು ಬೇನಾಮಿ ಕಾಯ್ದೆಯನ್ವವ ಗಂಭೀರ ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ.
ಈ ಹಿಂದೆ ಈ ಕಾಯ್ದೆಯನ್ವಯ3 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲಾಗುತ್ತಿದ್ದರೆ ಈ ವರ್ಷ ಜಾರಿಯಾದ ತಿದ್ದುಪಡಿಗೊಂಡ ಕಾಯ್ದೆಯ ಪ್ರಕಾರ ತಪ್ಪಿತಸ್ಥರು ಐದರಿಂದ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ಬೇನಾಮಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.25ರಷ್ಟುಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುವುದು.
ಬೇನಾಮಿ ಕಾಯ್ದೆಯನ್ವಯ ಆಸ್ತಿಯನ್ನು ಹಿಂದಕ್ಕೆ ಪಡೆಯಬಹುದೇ ?
ಬೇನಾಮಿ ಆಸ್ತಿ ಹೊಂದಿರುವವರು ಮತ್ತೆ ಆ ಆಸ್ತಿಯ ಮೇಲೆ ಹಕ್ಕು ಸ್ಥಾಪಿಸುವಂತಿಲ್ಲ. ಆದರೂ ಬೇನಾಮಿ ಆಸ್ತಿ ವಿರುದ್ಧ ದಾಖಲಿಸಲಾದಪ್ರಕರಣಗಳ ವಿಚಾರಣೆಗೆಂದು ಮೇಲ್ಮನವಿ ವ್ಯವಸ್ಥೆ (ಅಪೆಲ್ಲೇಟ್ ಮೆಕಾನಿಸಂ) ಮಾಡಲಾಗಿದೆ.
ಬೇನಾಮಿ ಕಾಯ್ದೆಂನ್ವಯ ಪತ್ತೆಯಾದ ಯಾವುದೇ ಆಸ್ತಿಯನ್ನು ಕೇಂದ್ರ ಸರಕಾರವು ಆಸ್ತಿಯನ್ನು ಹೊಂದಿದವರಿಗೆ ಯಾವುದೇ ಪರಿಹಾರ ನೀಡದೆವಶಪಡಿಸಿಕೊಳ್ಳಬಹುದಾಗಿದೆ.
ಕ್ರಮ ಕೈಗೊಳ್ಳುವ ಅಧಿಕಾರಿ ಯಾರು ?
ಕೇಂದ್ರ ವಿತ್ತ ಸಚಿವಾಲಯದಡಿ ಬರುವ ಜಂಟಿ/ಸಹಾಯಕ ಆದಾಯ ತೆರಿಗೆ ಆಯುಕ್ತರು,ಆದಾಯ ತೆರಿಗೆಯ ಸಹಾಯಕ/ಉಪಆಯುಕ್ತರು ಹಾಗೂ ಪ್ರತಿಯೊಂದು ಪ್ರಾಂತ್ಯದ ತೆರಿಗೆ ವಸೂಲಾತಿ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಈ ಕಾಯ್ದೆಯನ್ವಯ ಅಧಿಕಾರ ನೀಡಲಾಗುವುದು.







