ಪತ್ನಿಯನ್ನು ಕೊಂದ 70ವರ್ಷದ ವೃದ್ಧ !

ವೇಂಙರ,(ಮಲಪ್ಪುರಂ)ಡಿ.29: ಕೇರಳ ಮಲಪ್ಪುರಂ ಕಣ್ಣಮಂಗಲಂ ವಾಲಕ್ಕುಡಿ ಎಂಬಲ್ಲಿ 70ವರ್ಷದ ವಯೋವೃದ್ಧ ತನ್ನ ಮೊದಲ ಪತ್ನಿಯನ್ನು ಮನೆಯೊಳಗೆ ಕಡಿದು ಕೊಲೆಗೈದ ಘಟನೆ ನಡೆದಿದೆ. ವಾಲಕ್ಕುಡಿ ಪುಯಿಕುನ್ನತ್ ಅಬ್ದುಲ್ಲಕುಟ್ಟಿ(70) ಪತ್ನಿರುಖಿಯಾ(60)ರನ್ನು ಕೊಲೆಮಾಡಿದ್ದು, ಬುಧವಾರ ಬೆಳಗ್ಗೆ ಎಂಟೂವರೆ ಗಂಟೆ ವೇಳೆ ಎರಡನೆ ಪತ್ನಿ,ಮಕ್ಕಳನ್ನು ಕೋಣೆಯಿಂದ ಹೊರಗೆಹಾಕಿ ಕೃತ್ಯವೆಸಗಿದ್ದಾನೆ. ಬೊಬ್ಬೆಹೊಡೆಯುವುದು ಕೇಳಿ ಮಕ್ಕಳು ಬಾಗಿಲು ತೆರೆಯಲು ಯತ್ನಿಸಿದರೂ ಅವರಿಂದಾಗಿಲ್ಲ. ನೆರೆಯವರು ಸೇರಿ ರುಖಿಯಾರನ್ನು ಕ್ಯಾಲಿಕಟ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಆರೋಪಿಯನ್ನು ವೇಂಙರ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಮಲಪ್ಪುರಂ ಸಿಐ ಪ್ರೇಂಜಿತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ರುಖಿಯಾರಿಗೆ ಅಬ್ದುಲ್ಲಕುಟ್ಟಿ ಮಕ್ಕಳನ್ನು ಹೊಂದಿಲ್ಲ.
ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆದ ಬಳಿಕ ಮಹಿಳೆಯ ಸ್ವಂತ ಊರು ವಯನಾಡ್ ಚೂರಲ್‌ಮಲೆಗೆ ಕೊಂಡೊಯ್ಯಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೊಲೆಗೆ ಬಳಸಿದ ಮಚ್ಚನ್ನು ಕಳೆದವಾರ ಖರೀದಿಸಲಾಗಿತ್ತು. ಕೃತ್ಯ ನಡೆದಿರುವ ಕೋಣೆಗೆಪೊಲೀಸರು ಬೀಗ ಜಡಿದಿದ್ದಾರೆಂದು ವರದಿಯಾಗಿದೆ.







