ಪಾಳು ಬಾವಿಯೊಳಗೆ ಬಿದ್ದ ಆನೆ ಮೃತ್ಯು

ಕೋಲ್ಕತಾ, ಡಿ.29: ಆನೆಯೊಂದು ತೆರೆದ ಪಾಳು ಬಾವಿಯೊಳಗೆ ಆಕಸ್ಮಿಕವಾಗಿ ಜಾರಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಕೋಲ್ಕತಾದ ಮಿಡ್ನಾಪುರ ಜಿಲ್ಲೆಯಿಂದ ವರದಿಯಾಗಿದೆ.
ಆನೆಗಳು ಪರಸ್ಪರ ಕಾಳಗದಲ್ಲಿ ತೊಡಗಿದ್ದಾಗ ನೀರಾವರಿ ಉದ್ದೇಶದಿಂದ ತೋಡಲಾಗಿರುವ ಬಾವಿಯೊಳಗೆ ಒಂದು ಆನೆ ಬಿದ್ದಿದೆ. ಸುಮಾರು 8 ಗಂಟೆಗಳ ಕಾರ್ಯಾಚರಣೆಯ ಬಳಿಕ ಜೆಸಿಬಿಯ ಮೂಲಕ ಆನೆಯನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆನೆ ಸಾವನ್ನಪ್ಪಿತ್ತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Next Story





