ಸಿಎಂ ಹೆಸರಿನ ನಕಲಿ ಟ್ವಿಟರ್ ಅಕೌಂಟ್ ಗಳ ವಿರುದ್ಧ ದೂರು

ಬೆಂಗಳೂರು, ಡಿ.29: ಸಿಎಂ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ಗೊಂದಲಕಾರಿ ಟ್ವೀಟ್ ಗಳನ್ನು ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಸೈಬರ್ ಕ್ರೈಂ ಎಸ್ಪಿಗೆ ದೂರನ್ನು ನೀಡಿದ್ದಾರೆ.
ಮೊದಲು Cmofkarnatka ಎಂಬ ಖಾತೆಯನ್ನು ತೆರೆದು ಅದರಲ್ಲಿ ಗೊಂದಲಕಾರಿ ಪೋಸ್ಟ್ ಗಳನ್ನು ಟ್ವೀಟ್ ಮಾಡುತ್ತಿದ್ದರು. ನಂತರ ಆ ಖಾತೆಯನ್ನು ಡಿಲೀಟ್ ಮಾಡಿ ಇನ್ನೊಂದು ನಕಲಿ ಖಾತೆ CMoKarnataka ತೆರೆಯಲಾಗಿದ್ದು, ಈ ಖಾತೆಯಲ್ಲಿ ಕೆಲವು ಗೊಂದಲಕಾರಿ ಪೋಸ್ಟ್ ಗಳನ್ನು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.
Next Story





