ಕೆ.ಸಿ.ರೋಡ್ ಎಸ್‌ವೈಎಸ್ ಸೆಂಟರ್‌ನಿಂದ ಸಾಮೂಹಿಕ ವಿವಾಹ

ಉಳ್ಳಾಲ, ಡಿ.29: ಸುಮಾರು 35, 40 ವಯಸಿನ ಮುಸ್ಲಿಂ ಯುವತಿಯರು ಆರ್ಥಿಕ ಸಮಸ್ಯೆಯಿಂದ ಮದುವೆಯ ಕನಸು ಕಾಣುತ್ತಿದ್ದಾರೆ. ಅದನ್ನು ತಿಳಿದೂ ಕಣ್ಮುಚ್ಚಿ ಕುಳಿತುಕೊಳ್ಳುವುದು ಪ್ರವಾದಿ ಮುಹಮ್ಮದ್ (ಸ)ರು ಇಷ್ಟಪಡದ ಕಾರ್ಯ ಎಂದು ಎಸ್‌ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಕೆ.ಪಿ ಹುಸೈನ್ ಸಅದಿ ಕೆ.ಸಿ. ರೋಡು ಹೇಳಿದರು.
ಕೋಟೆಕಾರಿನ ಖಾಸಗಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್‌ವೈಎಸ್ ಕೆ.ಸಿ. ರೋಡು ಸೆಂಟರ್ ವತಿಯಿಂದ ಗುರುವಾರ ನಡೆದ 8 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಕೆ.ಎಂ. ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಮದುವೆಗಳು ದುಬಾರಿಯಾಗುತ್ತಿರುವ ಈ ಕಾಲದಲ್ಲಿ ಸರಳ ವಿವಾಹ ಅತ್ಯಗತ್ಯ. ವರದಕ್ಷಿಣೆ ವಿರೋಧ ಚಳವಳಿಗಳು ಪರಿಣಾಮಕಾರಿಯಾಗಬೇಕಾದರೆ ಸರಳ ವಿವಾಹಗಳಂತಹ ಕಾರ್ಯಕ್ರಮ ಅಗತ್ಯ ಎಂದು ಹೇಳಿದರು.
ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹೀಂ ಮುಸ್ಲಿಯರ್ ಬೇಕಲ್ 8 ಜೋಡಿಗಳಿಗೆ ನಿಖಾಹ್ ನೇರವೆರಿಸಿದರು.
ಎಸ್‌ವೈಎಸ್ ದ.ಕ ಜಿಲ್ಲಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ, ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ, ತಾಪಂ ಸದಸ್ಯ ಸಿದ್ದೀಕ್, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಮೊಯ್ದಿನ್ ಬಾವ, ಹಸನ್ ಮಾಡೂರು, ಕೆ.ಸಿ. ರೋಡು ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ, ಉಚ್ಚಿಲ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಎಸ್‌ಎಂಎ ಉಳ್ಳಾಲ ವಲಯ ಅಧ್ಯಕ್ಷ ಪಿ.ಎ. ಅಹ್ಮದ್ ಕುಂಞಿ ಹಾಜಿ ಪಿಲಿಕೂರು, ಎಸ್ಸೆಸ್ಸೆಫ್ ಮುಖಂಡ ಅಯೂಬ್ ಖಾನ್ ಸಅದಿ, ಉದ್ಯಮಿ ನಝೀರ್ ಹಾಜಿ, ಸಮಾಜ ಸೇವಕ ದಯಾನಂದ್ ರೈ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಹಕೀಂ, ಸಮಾಜ ಸೇವಕ ಶಿವರಾಮ್, ತಲಪಾಡಿ ಜುಮಾ ಮಸೀದಿಯ ಅಧ್ಯಕ್ಷ ಎಂ.ಅಬ್ಬಾಸ್, ಉದ್ಯಮಿ ಅನ್ಸಾಫ್, ಕೆ.ಎಂ ಮುಸ್ತಫ ನಈಮಿ ಉಪಸ್ಥಿತರಿದರು.







