ಅಕ್ರಮ ಮರಳು ಸಾಗಣಿಕೆ : 2 ಬೊಲೆರೊ ವಶಕ್ಕೆ
ಹೊನ್ನಾವರ , ಡಿ.29 : ತಾಲೂಕಿನ ಕಳಸನಮೋಟೆಯಲ್ಲಿ ಅಕ್ರಮವಾಗಿ 2 ಬೊಲೆರೊ ವಾಹನದಲ್ಲಿ ಮರಳು ಸಾಗಾಣಿಕೆ ಮಾಡುತ್ತಿರುವುದನ್ನು ಪ್ರೊಬೆಷನರಿ ಐಎಎಸ್ ಅಧಿಕಾರಿ ಬಿ. ಫೌಜಿಯಾ ತರನ್ನಮ್, ನೇತೃತ್ವದಲ್ಲಿ ತಹಶೀಲದಾರ ವಿ.ಆರ್.ಗೌಡ ಹಾಗೂ ಕಂದಾಯ ಸಿಬ್ಬಂದಿಗಳು ಪತ್ತೆಹಚ್ಚಿ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಅನಧಿಕೃತ ಮರಳು ಸಾಗಾಣಿಕೆ ಮಾಡುತ್ತಿರುವ ಬೊಲೆರೊ ವಾಹನ ಸಂಖ್ಯೆ ಕೆಎ 47-4669 ಇವುಗಳನ್ನು ವಶಪಡಿಸಿಕೊಂಡಿದ್ದು, ವಾಹನಗಳ ಮಾಲಕರಾದ ಮಹಾಬಲೇಶ್ವರ ಶಿವಪ್ಪ ನಾಯ್ಕ, ಮಂಕಿ ಹಾಗೂ ಉದಯ ರಾಮಚಂದ್ರ ನಾಯ್ಕ ಜಡ್ಡಿ ಅನಂತವಾಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಹಸೀಲ್ದಾರ ತಿಳಿಸಿದ್ದಾರೆ.
Next Story





