Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕಟ್ಟರ್ ಯಹೂದಿ ಮಹಿಳೆ ಮೇಲೆ ಹಲ್ಲೆ...

ಕಟ್ಟರ್ ಯಹೂದಿ ಮಹಿಳೆ ಮೇಲೆ ಹಲ್ಲೆ ಮಾಡಿದಾತನನ್ನು ಹಿಡಿದು ಕೊಟ್ಟ ಮುಸ್ಲಿಂ ಬಾಲಕ

ವಾರ್ತಾಭಾರತಿವಾರ್ತಾಭಾರತಿ29 Dec 2016 5:32 PM IST
share
ಕಟ್ಟರ್ ಯಹೂದಿ ಮಹಿಳೆ ಮೇಲೆ ಹಲ್ಲೆ ಮಾಡಿದಾತನನ್ನು ಹಿಡಿದು ಕೊಟ್ಟ ಮುಸ್ಲಿಂ ಬಾಲಕ

ನ್ಯೂಯಾರ್ಕ್, ಡಿ.29: ಬ್ರೂಕ್‌ಲಿನ್ ಸಬ್‌ವೇ ರೈಲಿನಲ್ಲಿ ಸಂಚರಿಸುತ್ತಿದ್ದ ಯೆಹೂದಿ ಮಹಿಳೆಯೋರ್ವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ ಅಲೆಮಾರಿ ಸೈಕೋ ವ್ಯಕ್ತಿಯೋರ್ವನನ್ನು ಮುಸ್ಲಿಂ ವಿದ್ಯಾರ್ಥಿಯೋರ್ವ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ನಡೆದಿದೆ.

 ಸಂಜೆ ಸುಮಾರು 7.50ರ ವೇಳೆ ಕೋನಿ ದ್ವೀಪಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆ ಮಹಿಳೆ ತನ್ನಷ್ಟಕ್ಕೆ ಪುಸ್ತಕವೊಂದನ್ನು ಓದುತ್ತಿದ್ದಳು. ನ್ಯೂಕರ್ಕ್ ಏವ್ ಸ್ಟೇಷನ್ ಬಳಿ ರೈಲು ಬರುತ್ತಿದ್ದಂತೆಯೇ ಏಕಾಏಕಿ ಮಹಿಳೆಯ ಬಳಿ ಬಂದ ಜೋನ್ಸ್ ಎಂಬ ವ್ಯಕ್ತಿ ಆಕೆಯ ಕಪಾಳಕ್ಕೆ ಬಾರಿಸಿದ. ಈ ಏಟಿನಿಂದ ಆಕೆಯ ತುಟಿ ಹರಿದು ಹೋಯಿತು ಮತ್ತು ರಕ್ತ ಸುರಿಯತೊಡಗಿತು. ಆಕೆ ಧರಿಸಿದ್ದ ಕನ್ನಡಕ ಪುಡಿಪುಡಿಯಾಯಿತು.

ಯಾಕೆ ನನ್ನನ್ನು ಹೊಡೆಯುತ್ತಿದ್ದೀ.. ಎಂದು ಚೀರುತ್ತಾ ಆ ಮಹಿಳೆ ನೆಲದ ಮೇಲೆ ಬಿದ್ದು ಮೂರ್ಚೆ ತಪ್ಪಿದಳು. ಈ ವೇಳೆ ಪಕ್ಕದಲ್ಲಿದ್ದ ಮತ್ತೋರ್ವ ಮಹಿಳೆ ಈಕೆಯ ಸಹಾಯಕ್ಕೆ ಧಾವಿಸಿ ಬಂದಳು. ಈ ವೇಳೆ ಹಲ್ಲೆಗೈದ ಜೋನ್ಸ್ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ.

 ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಹ್ಮದ್ ಖಲೀಫಾ ಎಂಬ 17ರ ಹರೆಯದ ಮುಸ್ಲಿಂ ಬಾಲಕ ಅತೀವ ಸಾಹಸ ಮೆರೆದು ಜೋನ್ಸ್‌ನ ಬೆನ್ನಟ್ಟಿದ. ಸುಮಾರು 6 ಅಡಿ 6 ಇಂಚು ಎತ್ತರದ ದೃಢಕಾಯ ವ್ಯಕ್ತಿ ಜೋನ್ಸ್ ಶರವೇಗದಿಂದ ಓಡುತ್ತಿದ್ದರೆ ಖಲೀಫಾ ಪಟ್ಟುಬಿಡದೆ ಈತನ ಬೆನ್ನು ಹತ್ತಿದ. ಈ ವೇಳೆ ಜೋನ್ಸ್ ಓಡಿ ತಪ್ಪಿಸಿಕೊಂಡಿದ್ದ. ಕೊನೆಗೂ ಈತನನ್ನು ಬಸ್‌ನಿಲ್ದಾಣ ಒಂದರಲ್ಲಿ ಪತ್ತೆಹಚ್ಚುವಲ್ಲಿ ಖಲೀಫಾ ಯಶಸ್ವಿಯಾದ. ಜೋನ್ಸ್‌ನ ಬಳಿ ಹೋಗಿ ನಿಂತುಕೊಂಡ.

 ಅಷ್ಟರಲ್ಲಿ ಬಸ್ ಒಂದನ್ನು ಏರಿದ್ದ ಜೋನ್ಸ್. ಈ ವೇಳೆ ಪೊಲೀಸರೂ ಅಲ್ಲಿಗೆ ಬಂದರು. ಆಗ ಬಸ್ಸಿನಲ್ಲಿ ಅಡಗಿ ಕುಳಿತಿದ್ದ ಜೋನ್ಸ್‌ನ ಬಳಿ ತೆರಳಿದ ಖಲೀಫಾ, ಹೇಡಿ.. ಹೊರಗೆ ಬಾ.. ಎಂದು ಗದರಿದ. ಈ ವೇಳೆ ಒಮ್ಮಿಂದೊಮ್ಮೆಗೇ ಹಿಂಸಾತ್ಮಕವಾಗಿ ವರ್ತಿಸತೊಡಗಿದ ಜೋನ್ಸ್, ನನ್ನ ಸುದ್ದಿಗೆ ಬಂದರೆ ನಿಮ್ಮನ್ನೆಲ್ಲಾ ಮುಗಿಸಿ ಬಿಡುವೆ ಎಂದು ಅಬ್ಬರಿಸತೊಡಗಿದ. ಕಡೆಗೂ ಪೊಲೀಸರು ಆತನನ್ನು ಬಸ್ಸಿನಿಂದ ಹೊರಗೆಳೆದು ಬಂಧಿಸುವಲ್ಲಿ ಸಫಲರಾದರು.

ಇದಕ್ಕೂ ಮುಂಚೆ, ಸುಮಾರು 9 ತಿಂಗಳ ಹಿಂದೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೋರ್ವನನ್ನು ಜೀವದ ಹಂಗು ತೊರೆದು ರಕ್ಷಿಸುವಲ್ಲಿ ಖಲೀಫಾ ಯಶಸ್ವಿಯಾಗಿದ್ದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X