ದೀಪಾ ಕರ್ಮಾಕರ್‌ಗೆ ಲಕ್ಸುರಿ ಕಾರಿನ ಬದಲಿಗೆ ಲಭಿಸಿತು 25 ಲಕ್ಷ ರೂ.

ಹೊಸದಿಲ್ಲಿ, ಡಿ.29: ರಿಯೋ ಒಲಿಂಪಿಕ್ಸ್‌ನಲ್ಲಿ ನೀಡಿರುವ ಅಮೋಘ ಪ್ರದರ್ಶನಕ್ಕಾಗಿ ಬಿಎಂಡಬ್ಲು ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಇದೀಗ ಕಾರನ್ನು ಹಿಂದಿರುಗಿಸಿ 25 ಲಕ್ಷ ರೂ. ನಗದನ್ನು ಸ್ವೀಕರಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತದ ಮೊದಲ ಜಿಮ್ನಾಸ್ಟಿಕ್ ತಾರೆ ಎನಿಸಿಕೊಳ್ಳುವ ಮೂಲಕ ಪ್ರಸಿದ್ದಿಗೆ ಬಂದಿದ್ದ ಕರ್ಮಾಕರ್ ತನ್ನ ತವರು ಪಟ್ಟಣ ಅಗರ್ತಲದಲ್ಲಿ ಐಶಾರಾಮಿ ಬಿಎಂಡಬ್ಲು ಕಾರು ಓಡಿಸಲು ರಸ್ತೆಗಳು ಕಿರಿದು ಹಾಗೂ ಹಾಳಾಗಿವೆ. ಪಟ್ಟಣದಲ್ಲಿ ಕಾರಿನ ಸರ್ವಿಸ್ ಸೆಂಟರ್ ಕೂಡ ಇಲ್ಲ ಎಂಬ ಕಾರಣ ನೀಡಿ ಕಾರನ್ನು ವಾಪಾಸು ನೀಡಿದ್ದರು. ‘‘ದೀಪಾರ ಪರಿಸ್ಥಿತಿಯನ್ನು ಪರಿಗಣಿಸಿ ಲಕ್ಸುರಿ ಕಾರಿನ ಬದಲಿಗೆ 25 ಲಕ್ಷ ರೂ. ನಗದು ಮೊತ್ತವನ್ನು ದಾನಿಗಳು ನೀಡಿದ್ದಾರೆ’’ ಎಂದು ಕೋಚ್ ಬಿಶ್ವೇಶ್ವರ ನಂದಿ ಹೇಳಿದ್ದಾರೆ.
ಇಂಡಿಯನ್ ಕ್ರಿಕೆಟ್ ಲೆಜಂಡ್ ಹಾಗೂ ಬಿಎಂಡಬ್ಲು ಕಾರಿನ ರಾಯಭಾರಿ ಸಚಿನ್ ತೆಂಡುಲ್ಕರ್ ಅವರು ಕರ್ಮಾಕರ್ ಹಾಗೂ ಇತರ ಇಬ್ಬರು ಒಲಿಂಪಿಕ್ಸ್ ಪದಕ ವಿಜೇತರಾದ ಶಟ್ಲರ್ ಪಿವಿ ಸಿಂಧು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್, ಸಿಂಧು ಅವರ ಕೋಚ್ ಪಿ. ಗೋಪಿಚಂದ್‌ಗೆ ಬಿಎಂಡಬ್ಲು ಕಾರಿನ ಕೀ ಹಸ್ತಾಂತರಿಸಿದ್ದರು.





