ಸಚಿವ ಪ್ರಮೋದ್‌ರಿಂದ ಸ್ಪಂದನ ಕೇಂದ್ರಕ್ಕೆ ಚಾಲನೆ

ಉಡುಪಿ, ಡಿ.29: ಸರಕಾರಿ ಸೇವೆಗಳು ಸುಲಲಿತವಾಗಿ ಸಾರ್ವಜನಿಕರ ಸೇವೆಗೆ ಲ್ಯವಾಗಬೇಕೆಂಬ ದೃಷ್ಟಿಯಿಂದ ಒಂದೇ ಸೂರಿನಡಿ ‘ಸ್ಪಂದನ’ ಜನಸೇವಾ ಕೇಂದ್ರವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಗುರುವಾರ ಮಣಿಪಾಲದಲ್ಲಿ ಉದ್ಘಾಟಿಸಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಪಂನ ವಿಕಲಚೇತನ ಸಬಲೀಕರಣ ಇಲಾಖೆ ಬಳಿ ಸ್ಪಂದನ ಕಚೇರಿಯನ್ನು ಉದ್ಘಾಟಿಸಿದ ಸಚಿವರು, ಸಾರ್ವಜನಿಕರ ಸೌಲಭ್ಯಕ್ಕಾಗಿ ಹಾಗೂ ಕಾಲಮಿತಿಯೊಳಗೆ ಸರಕಾರಿ ಸೌಲ್ಯಗಳನ್ನು ಒದಗಿಸುವ ದೃಷ್ಟಿಯಿಂದ ಕಚೇರಿ ಆರಂಭಿಸಲಾಗಿದೆ. ಎಲ್ಲಾ ಸೇವೆಗಳ ಸದ್ಬಳಕೆಯಾಗಲಿ ಎಂದು ಶುಭಹಾರೈಸಿದರು.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯಿಂದ ಸೇವೆಗಳಲ್ಲಿ ವಿಳಂಬವಾಗುತ್ತಿದೆ ಎಂದು ಸಚಿವರು ಇದೇ ವೇಳೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಏಕಗವಾಕ್ಷಿ ಸ್ಪಂದನ ಜನಸೇವಾ ಕೇಂದ್ರಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ಕಾಲಮಿತಿಯೊಳಗೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ವಿತರಿಸಲಾಗುವುದು. ಏಕಗವಾಕ್ಷಿ ಕೇಂದ್ರಗಳಲ್ಲಿ ಸ್ಥಾಪಿಸಲಾಗುವ ಮೂರು ಕೌಂಟರ್‌ಗಳಲ್ಲಿ ಎಲ್ಲ ಸೇವೆಗಳನ್ನು ಒದಗಿಸಲು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ಜಿಲ್ಲಾ ಮಟ್ಟದಲ್ಲಿ ಸ್ಪಂದನ ಕೇಂದ್ರಗಳನ್ನು ಮಾದರಿ ಜನಸ್ನೇಹಿ ಕೇಂದ್ರ ಗಳನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಂದನ ಕೇಂದ್ರದ ಬಗ್ಗೆ ಸಚಿವರಿಗೆ ವಿವರಿಸಿದರು.
ಇದಲ್ಲದೆ ಇ ಸ್ಟ್ಯಾಂಪಿಂಗ್ ಸೌಲಭ್ಯ , ಸಾರಿಗೆ ಇಲಾಖೆ ಅರ್ಜಿ, ಪೊಲೀಸ್ ಇಲಾಖೆ, ಅನುಕಂಪದ ಆಧಾರದ ನೇಮಕಾತಿ, ಪಿಟಿಸಿಎಲ್ ಕಾಯಿದೆಯಡಿ ಭೂಮಿ ಮಾರಾಟ, ದರ್ಖಾಸ್ತು ಯೋಜನೆಯಲ್ಲಿ ಮಂಜೂರಾದ ಜಮೀನು ಮಾರಾಟ, ಜಮೀನು ಕೊಳ್ಳಲು ಅನುಮತಿ ಕೋರಿ ಕೆಎಲ್‌ಆರ್ ನಿಯಮ 109 ಪ್ರಕಾರ ಅರ್ಜಿ ಸಲ್ಲಿಸುವುದು ಹಾಗೂ ಭೂಪರಿವರ್ತನೆಗಾಗಿ ಅರ್ಜಿ, ಪೆಟ್ರೋಲ್ ಬಂಕ್ ಸ್ಥಾಪನೆಗೆ ನಿರಾಕ್ಷೇಪಣಾ ಪತ್ರ, ಚಿತ್ರ ಮಂದಿರ ನಿರ್ಮಿಸಲು ನಿರಾಕ್ಷೇಪಣಾ ಪತ್ರಕ್ಕೆ, ಹೊಸದಾಗಿ ಪಟಾಕಿ ಮಾರಾಟ ಮಾಡಲು ಪರವಾನಗಿ ಕೋರಿ, ಕಲ್ಲು ಗಣಿಗಾರಿಕೆಗೆ ಅನುಮತಿ, ಸಿಂಧುತ್ವ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಸೇರಿದಂತೆ ಎಲ್ಲ ಸೇವೆಗಳು ಸ್ಪಂದನ ಕೇಂದ್ರದ ಮೂಲಕ ನೀಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅನುರಾಧ, ತಹಶೀಲ್ದಾರ್ ಮಹೇಶ್ಚಂದ್ರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.







