ಮಣಿಪಾಲ ಸಂಗಮ ಕಲಾವಿದರ ‘ವಾಲಿವಧೆ’ಗೆ ಅಗ್ರಪ್ರಶಸ್ತಿ
ತುಳುಕೂಟದ 15ನೇ ವರ್ಷದ ಕೆಮ್ತೂರು ತುಳುನಾಟಕ ಸ್ಫರ್ಧೆ ಫಲಿತಾಂಶ

ಉಡುಪಿ, ಡಿ.29: ತುಳುಕೂಟ ಉಡುಪಿ ಇವರ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಡಿ.20ರಿಂದ ಡಿ.28ರವರೆಗೆ 9 ದಿನಗಳ ಕಾಲ ನಡೆದ 15ನೇ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಮಣಿಪಾಲ ಸಂಗಮ ಕಲಾವಿದರು ಅಭಿನಯಿಸಿದ ‘ವಾಲಿವಧೆ’ ನಾಟಕ ಅಗ್ರಪ್ರಶಸ್ತಿ ಯೊಂದಿಗೆ 15,000ರೂ. ನಗದು ಬಹುಮಾನ ಗೆದ್ದುಕೊಂಡಿದೆ.
ಹಾರಾಡಿಯ ಭೂಮಿಕಾ ತಂಡದ ‘ಅರಕ್ಕ್‌ದ ಗುಡ್ಡೆ’ ದ್ವಿತೀಯ ಶ್ರೇಷ್ಠ ನಾಟಕವಾಗಿ 10,000ರೂ. ನಗದು ಹಾಗೂ ಟ್ರೋಫಿ ಜಯಿಸಿದರೆ, ಪಟ್ಲ ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಅಭಿನಯಿಸಿದ ‘ವಾರ್ಡ್ ನಂಬರ್ ಆಜಿ’ ನಾಟಕ ತೃತೀಯ ಬಹುಮಾನದೊಂದಿಗೆ 7,000ರೂ.ನಗದು ಜಯಿಸಿದೆ.
ಮಣಿಪಾಲ ಸಂಗಮ ಕಲಾವಿದರ ವಾಲಿವಧೆ ನಾಟಕದ ನಿರ್ದೇಶಕ ಗಣೇಶ್ ಎಂ. ಅವರಿಗೆ ಪ್ರಥಮ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ (1,000ರೂ.ನಗದು), ಭೂಮಿಕಾ ತಂಡದ ಅರಕ್ಕ್‌ದ ಗುಡ್ಡೆ ನಾಟಕದ ನಿರ್ದೇಶಕ ಬಿ.ಎಸ್.ರಾಮ್ ಶೆಟ್ಟಿ ಅವರಿಗೆ ದ್ವಿತೀಯ, ಪಟ್ಲ ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ತಂಡದ ವಾರ್ಡ್ ನಂಬರ್ ಆಜಿ ನಾಟಕ ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ಅವರಿಗೆ ತೃತೀಯ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ದೊರೆತಿದೆ.
ವಾಲಿವಧೆ ನಾಟಕಕ್ಕೆ ಪ್ರಥಮ ಶ್ರೇಷ್ಠ ರಂಗಪರಿಕರ ಪ್ರಶಸ್ತಿ (ರೂ.1000), ಭೂಮಿಕಾ ತಂಡದ ಅರಕ್ಕ್‌ದ ಗುಡ್ಡೆ ನಾಟಕಕ್ಕೆ ದ್ವಿತೀಯ ಹಾಗೂ ಕೊಡವೂರು ನವಸುಮ ರಂಗಮಂಚ ತಂಡದ ಶೂದ್ರ ತಪಸ್ವಿ ನಾಟಕಕ್ಕೆ ತೃತೀಯ ಶ್ರೇಷ್ಠ ರಂಗಪರಿಕರ ಪ್ರಶಸ್ತಿ ದೊರೆತಿದೆ.
ಮಣಿಪಾಲ ಸಂಗಮ ಕಲಾವಿದರ ವಾಲಿವಧೆ ನಾಟಕಕ್ಕೆ ಪ್ರಥಮ ಶ್ರೇಷ್ಠ ಬೆಳಕು ಪ್ರಶಸ್ತಿ (ರೂ.1000), ಕೊಡವೂರು ನವಸುಮ ರಂಗಮಂಚ ತಂಡದ ಶೂದ್ರ ತಪಸ್ವಿಗೆ ದ್ವಿತೀಯ ಹಾಗೂ ಭೂಮಿಕಾ ತಂಡದ ಅರಕ್ಕ್‌ದ ಗುಡ್ಡೆ ನಾಟಕಕ್ಕೆ ತೃತೀಯ ಪ್ರಶಸ್ತಿ ಲಭಿಸಿದೆ.
ವಾಲಿವಧೆ ನಾಟಕದ ಸಂಗೀತ ನಿರ್ದೇಶಕ ಗಣೇಶ್ ಎಂ.ಅವರಿಗೆ ಪ್ರಥಮ ಶ್ರೇಷ್ಠ ಸಂಗೀತ ಪ್ರಶಸ್ತಿ (ರೂ.1000), ಅರಕ್ಕ್‌ದ ಗುಡ್ಡೆ ನಾಟಕದ ರೋಹಿತ್ ಎಸ್.ಬೈಕಾಡಿ ದ್ವಿತೀಯ, ಮಲ್ಪೆ ಕರಾವಳಿ ಕಲಾವಿದರು ತಂಡದ ಬಗ್ಗನ ಭಾಗ್ಯೊ ನಾಟಕ ರೋಹಿತ್ ಕುಮಾರ್ ಮಲ್ಪೆಗೆ ತೃತೀಯ ಪ್ರಶಸ್ತಿ ಲಭಿಸಿದೆ.
ಶ್ರೇಷ್ಠ ನಟ,ನಟಿ:
ಮಣಿಪಾಲ ಸಂಗಮ ಕಲಾವಿದರ ವಾಲಿವಧೆ ನಾಟಕದ ವಾಲಿ ಪಾತ್ರಧಾರಿ ಭುವನ್ ಮಣಿಪಾಲ್ ಅವರಿಗೆ ಪ್ರಥಮ ಶ್ರೇಷ್ಠ ನಟ ಪ್ರಶಸ್ತಿ (ರೂ.1000), ಕೊಡವೂರು ನವಸುಮ ರಂಗಮಂಚ ತಂಡದ ಶೂದ್ರ ತಪಸ್ವಿ ನಾಟಕದ ಬೆರಣೆ ಪಾತ್ರಧಾರಿ ಬಾಲಕೃಷ್ಣ ಕೊಡವೂರು ದ್ವಿತೀಯ ಶ್ರೇಷ್ಠ ನಟ ಹಾಗೂ ವಾಲಿವಧೆ ನಾಟಕದ ಸುಗ್ರೀವ ಪಾತ್ರಧಾರಿ ಸಂದೀಪ್ ಎಲ್. ಶೆಟ್ಟಿಗಾರ್‌ಗೆ ತೃತೀಯ ಪ್ರಶಸ್ತಿ ದೊರೆತಿದೆ.
ಭೂಮಿಕಾ ತಂಡದ ಅರಕ್ಕ್‌ದ ಗುಡ್ಡೆ ನಾಟಕದ ರಾಣಿ ಪಾತ್ರಧಾರಿ ದುರ್ಗಾಶ್ರೀ ಎಸ್.ಸಾಲಿಕೇರಿ ಪ್ರಥಮ ಶ್ರೇಷ್ಠ ನಟಿ ಪ್ರಶಸಿತಿ (ರೂ.1000), ವಾಲಿವಧೆ ನಾಟಕದ ತಾರೆ ಪಾತ್ರಧಾರಿ ಚೈತ್ರಾ ಭಟ್ ಮಣಿಪಾಲ್‌ಗೆ ದ್ವಿತೀಯ, ಅದೇ ನಾಟಕದ ರಾಮ ಪಾತ್ರಧಾರಿ ವೀಣಾ ಎಲ್ ಅವರಿಗೆ ತೃತೀಯ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.
ವಾಲಿವಧೆ ನಾಟಕದ ಬಾಲಸುಗ್ರೀವ ಪಾತ್ರಧಾರಿ ಅನೀಶ್ ಪ್ರಸಾದ್ ಪಾಂಡೇಲು (ರೂ.500) ಅವರಿಗೆ ತೀರ್ಪುಗಾರರ ಮೆಚ್ಚುಗೆ ಪಡೆದ ಶ್ರೇಷ್ಠ ಬಾಲನಟ ಪ್ರಶಸ್ತಿ, ಕುಡ್ಲ ತೃಪ್ತಿ ಕಲಾವಿದರು ತಂಡದ ಬದುಕುನೆಂಚ ನಾಟಕದ ಮುರುಗನ್ ಪಾತ್ರಧಾರಿ ಶ್ರೀಕನ್ಯ ದೇವಾಡಿಗಗೆ(ರೂ.500) ತೀರ್ಪುಗಾರರ ಮೆಚ್ಚುಗೆ ಪಡೆದ ಶ್ರೇಷ್ಠ ಬಾಲ ನಟಿ ಪ್ರಶಸ್ತಿ ಲಭಿಸಿದೆ.
ಕೆಮ್ತೂರು ತುಳುನಾಟಕ ಸ್ಫರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ ಜ.15ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಶ್ರೇಷ್ಠ ನಾಟಕ ಪ್ರಶಸ್ತಿ ವಿಜೇತ ಮಣಿಪಾಲ ಸಂಗಮ ಕಲಾವಿದರ ವಾಲಿವಧೆ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಹಾಗೂ ಕೆಮ್ತೂರು ತುಳುನಾಟಕ ಸ್ಫರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ತಿಳಿಸಿದ್ದಾರೆ.







