ಕ್ಷುಲ್ಲಕ ವಿಷಯಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಅಂಕೋಲಾ, ಡಿ.29 : ವ್ಯಕ್ತಿಯೋರ್ವನು ಕ್ಷುಲಕ ವಿಷಯದಲ್ಲಿ ಪತ್ನಿಯೊಂದಿಗೆ ಜಗಳವಾಡಿ ಪತ್ನಿಗೆ ಕತ್ತಿಯಿಂದ ಹೊಡೆದು ಕೊಲೆ ಮಾಡಿದ ಘಟನೆ ತಾಲೂಕಿನ ಅಚವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಬಗಿ ಸಮೀಪದ ವಡ್ಡಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ ಘಟನೆ ನಡೆದಿದೆ.
ತಾರಾ ಮಹಾಬಲೇಶ್ವರ ಗೌಡ(25) ಕೊಲೆಯಾದ ಗೃಹಿಣಿಯಾಗಿದ್ದಾರೆ.
ಕೊಲೆ ಮಾಡಿದ ಆರೋಪಿ ಪತಿಯನ್ನು ಮಹಾಬಲೇಶ್ವರ ಪುಟ್ಟು ಗೌಡ (30) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಗದ್ದೆ ಕೆಲಸಕ್ಕೆ ಸಹಕರಿಸಿಲ್ಲಾ ಎನ್ನುವು ವಿಷಯಕ್ಕೆ ಪತಿ ಮಹಾಬಲೇಶ್ವರ ಗೌಡ ಕತ್ತಿಯಿಂದ ಬಲಕಿವಿಯ ಪಕ್ಕದಲ್ಲಿ ಬಲವಾಗಿ ಹೊಡೆದು ಪರಿಣಾಮ ಸ್ಥಳದಲ್ಲಿ ಕುಸಿದ್ದು ಬಿದ್ದು ಮೃತಪಟ್ಟಿರುತ್ತಾಳೆ. ದಂಪತಿಗೆ ಒಂದುವರೆ ವರ್ಷದ ಚಿತ್ರಾ ಎಂಬ ಮಗುವಿದೆ.
ಕೊಲೆಯಾದ ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜು, ಡಿವೈಎಸ್ಪಿ ಎನ್.ಟಿ.ಪ್ರಮೋದರಾವ್ ಸ್ಥಳಕ್ಕೆ ಭೇಟಿ ನೀಡಿದರು.
ಪಿಐ ಬಿ.ಡಿ.ಬುರ್ಲಿ ಅವರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪಿ.ಎಸ್.ಐ. ಎಚ್. ಓಂಕಾರಪ್ಪ, ಎ.ಎಸೈ ಲಲಿತಾ ರಜಪೂತ್ , ಸಿಬ್ಬಂದಿಗಳಾದ ಮದರಸಾಬ್ ಚಿಕ್ಕೇರಿ, ರಾಜೇಶ ನಾಯ್ಕ, ವಿಜಯ ರಾಠೋಡ ಆರೋಪಿ ವಶಪಡಿಸಿಕೊಳ್ಳುವಲ್ಲಿ ಸಹಕರಿಸಿದರು.
ಕೊಲೆ ಪ್ರಕರಣ ಕುರಿತು ಮೃತಳ ಸಹೋದರ ಶಿರಸಿ ತಾಲೂಕಿನ ದೇವನಹಳ್ಳಿಯ ವಿಷ್ಣು ದೇವು ಗೌಡ ಪೊಲೀಸ ದೂರು ನೀಡಿದ್ದಾರೆ.
'ನನ್ನ ಅಕ್ಕನ ಮನೆಯಲ್ಲಿ ಕುಟುಂಬದ ಆಸ್ತಿಯ ಸಲುವಾಗಿ ಪ್ರತಿನಿತ್ಯ ಜಗಳವಾಡುತ್ತಿದ್ದರು. ಸ್ಥಳೀಯ ಪ್ರಮುಖರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮಾಡಿದ ನಂತರ ಕೆಲ ದಿನಗಳ ಕಾಲ ಚೆನ್ನಾಗಿ ಜೀವನ ಸಾಗಿಸುತ್ತಿದ್ದರು. ನಮ್ಮ ಮನೆಯಿಂದ ಒಂದು ತಿಂಗಳ ಹಿಂದಷ್ಟೇ ಗಂಡನ ಮನೆಗೆ ಬಂದಿರುತ್ತಾಳೆ. ಗದ್ದೆಯೊಂದರಲ್ಲಿ ಕಚ್ಚಾ ಮನೆ ಕಟ್ಟಲು ನಾನು 15 ಸಾವಿರ ರೂ. ಸಹಾಯ ಮಾಡಿದ್ದೇನೆ. ಈ ಕೊಲೆಗೆ ಕುಟುಂಬದ ಕೆಲ ಸದಸ್ಯರು ಸಹ ಕಾರಣರಾಗುತ್ತಾರೆ. ಈ ವಿಷಯವನ್ನು ಪೊಲೀಸರು ಗಂಭೀರವಾಗಿ ತನಿಖೆ ಮಾಡಬೇಕು 'ಎಂದು ಮೃತಳ ಸಹೋದರ ವಿಷ್ಣು ಗೌಡ ಆಗ್ರಹಿಸಿದ್ದಾರೆ.







