‘ಇದಾ ಐನೂರರ ಹೊಸ ನೋಟು.. ನಾನು ಇವತ್ತೇ ನೋಡಿದ್ದು’
500 ರೂ.ಹೊಸ ನೋಟು ನೋಡಿದ ಸಿಎಂ ಉದ್ಘಾರ

ಮೈಸೂರು, ಡಿ.29: ‘‘ಇದಾ ಐನೂರ ಹೊಸ ನೋಟು. ನಾನು ಇವತ್ತೇ 500 ರೂಪಾಯಿಯ ಹೊಸ ನೋಟು ನೋಡಿದ್ದು ’’ ಹೀಗೆಂದವರು ಮುಖ್ಯ ಮಂತ್ರಿ ಸಿದ್ದರಾಮಯ್ಯ.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಶೇಷ ಪೂಜೆ ನೆರವೇರಿಸಿದರು.
ಪೂಜೆಯ ಬಳಿಕ ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಲು ಸಿಎಂ ಅವರ ಆಪ್ತ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು 500 ರೂಪಾಯಿಯ ಹೊಸ ನೋಟೊಂದನ್ನು ನೀಡಿದರು.
ನೋಟು ನೋಡಿದ ಕೂಡಲೇ ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದರು. ‘‘ನಾನು ಇವತ್ತಿನ ತನಕ 500ರ ಹೊಸ ನೋಟು ನೋಡಿಯೇ ಇಲ್ಲ ’’ ಎಂದರು.
Next Story





