ರಾಜ್ಯ ಮಟ್ಟದಲ್ಲಿ ಮಿಂಚಿದ ಪಿಪಿಸಿಯ ಸಾಂಸ್ಕೃತಿಕ ತಂಡ

ಉಡುಪಿ, ಡಿ.29: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ ಜಿಲ್ಲೆ, ವಲಯ ಮತ್ತು ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ತಂಡ ಅಗ್ರಸ್ಥಾನ ಪಡೆದಿದೆ.
ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನಿಂದ 9 ಮಂದಿ ವಿದ್ಯಾರ್ಥಿಗಳ ತಂಡ ಭಾಗಹಿಸಿದ್ದು, ಇವರು 4 ಪ್ರಥಮ ಹಾಗೂ 3 ದ್ವಿತೀಯ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ರಾಜ್ಯಕ್ಕೇ ಶ್ರೇಷ್ಠ ಸಾಂಸ್ಕೃತಿಕ ತಂಡವಾಗಿ ಹೊರಹೊಮ್ಮಿದೆ.
ಭಾವಗೀತೆಯಲ್ಲಿ ಅಕ್ಷಯ್ ಹೆಗಡೆ, ಭಕ್ತಿಗೀತೆಯಲ್ಲಿ ಸಾಗರ್ ಪಿ, ಆಶುಭಾಷಣದಲ್ಲಿ ದಿನೇಶ್ ಹೆಬ್ಬಾರ್ ಮತ್ತು ಶಾಲಿಕ ಪ್ರಥಮ ಸ್ಥಾನ ಗಳಿಸಿದರೆ, ಭಾವಗೀತೆಯಲ್ಲಿ ಮಾನಸ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಲೀಲಾಧರ್ ಹಾಗೂ ವೈಷ್ಣವಿ ಕಾಲೇಜಿಗೆ ಮಾತ್ರವಲ್ಲ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.
Next Story





