ನ.8ರ ಬಳಿಕ ಎಷ್ಟುಖಾತೆಗಳಲ್ಲಿ ಎಷ್ಟು ಕೋಟಿ ಠೇವಣಿಯಾಗಿದೆ ?
.cms_.jpeg)
ಹೊಸದಿಲ್ಲಿ,ಡಿ.29: ನ.8ರ ಬಳಿಕ 60 ಲಕ್ಷ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಳೆಯನೋಟುಗಳ ಮೂಲಕ ಏಳು ಲಕ್ಷ ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಜಮೆ ಮಾಡಿದ್ದಾರೆ ಎಂದು ಗುರುವಾರ ಇಲ್ಲಿ ಹೇಳಿದ ಸರಕಾರಿ ಅಧಿಕಾರಿಗಳು, ಕಪ್ಪುಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡಿದ ಮಾತ್ರಕ್ಕೆ ಅದು ಬಿಳಿಯಾಗುವುದಿಲ್ಲ, ಪ್ರತಿ ಪೈಸೆ ತೆರಿಗೆಯನ್ನೂ ವಸೂಲು ಮಾಡಲಾಗುವುದು ಎಂದು ಎಚ್ಚರಿಕೆನೀಡಿದರು.
ಸರಕಾರವು ಪ್ರಾಮಾಣಿಕ ಠೇವಣಿದಾರರಿಗೆ ಯಾವುದೇ ಕಿರುಕುಳವ್ನು ನೀಡುವು ದಿಲ್ಲ ,ಆದರೆ ಅಕ್ರಮ ಸಂಪತ್ತನ್ನು ಬಿಳಿಯಾಗಿಸಿಕೊಳ್ಳಲು ಪ್ರಯತ್ನಿಸುವ ಕಾಳಧನಿಕರ ತೆರಿಗೆ ವಂಚನೆ ಪ್ರಯತ್ನಗಳನ್ನು ವಿಫಲಗೊಳಿಸಲು ಅಂತಹ ಎಲ್ಲ ಠೇವಣಿಗಳ ಜಾಡು ಪತ್ತೆ ಹಚ್ಚಲಿದೆ ಎಂದು ಅವರು ಹೇಳಿದರು.
ನೋಟು ರದ್ದತಿಯ ಬಳಿಕ ಕಪ್ಪುಹಣವನ್ನು ಹೊಂದಿರುವವರು ದಂಡ ಪಾವತಿಸಿ ಅದನ್ನು ಕ್ರಮಬದ್ಧಗೊಳಿಸಿಕೊಳ್ಳಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ, ಇದಕ್ಕೂ ಬಗ್ಗದಿದ್ದರೆ ಸರಕಾರದ ಕಬಂಧಬಾಹುಗಳು ಖಂಡಿತವಾಗಿಯೂ ಅವರನ್ನು ತಲುಪಲಿವೆ ಎಂದರು.





