ಡಿ.30ರಂದು ಸ್ಟಾರ್ ಶಿಕ್ಷಣ ಸಂಸ್ಥೆಯ ವಿಂಶತಿ ಸಂಭ್ರಮ
ಮಂಗಳೂರು, ಡಿ.29: ಎರಡು ದಶಕಗಳ ಸಾರ್ಥಕ ಸೇವೆ ಸಲ್ಲಿಸಿರುವ ಸ್ಟಾರ್ ಶಿಕ್ಷಣ ಸಂಸ್ಥೆಯು ಡಿ.30ರಂದು ಸಂಜೆ 4ಕ್ಕೆ ನಗರದ ಪುರಭವನದಲ್ಲಿ ವಿಂಶತಿ ಸಂಭ್ರಮ ಆಚರಿಸಲಿದೆ.
ಯುನಿಟಿ ಇಲ್ಮ್ ಸೆಂಟರ್‌ನ ಪ್ರಾಂಶುಪಾಲ ಫುಝೈಲ್ ನದ್ವಿ ದುಆ ಮಾಡಲಿದ್ದು, ಮಲಾರ್ ಸೆಂಟ್ರಲ್ ಮುಸ್ಲಿಂ ಹಿ.ಪಾ. ಶಾಲೆಯ ಮುಖ್ಯ ಶಿಕ್ಷಕ ಎಚ್.ಎಂ. ಮುಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಸ್ಟಾರ್ ದಿಕ್ಸೂಚಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭ ಸಂಸ್ಥೆಯ ನಿರ್ದೇಶಕ ಸಲೀಂ ಮಲಾರ್‌ರ ಶಿಕ್ಷಕ ಎಚ್.ಎಂ.ಮುಹಮ್ಮದ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ನ್ಯಾಷನಲ್ ಟ್ಯುಟೋರಿಯಲ್‌ನ ಪ್ರಾಂಶುಪಾಲ ಖಾಲಿದ್ ಉಜಿರೆ, ಸ್ಟಾರ್ ಶಿಕ್ಷಣ ಸಂಸ್ಥೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕಿ ಅನುಸೂಯ, ಕಂಪ್ಯೂಟರ್ ಶಿಕ್ಷಣದಲ್ಲಿ ಅತ್ಯುತ್ತಮ ಸಾಧನೆ ತೋರಿದ ಶಿಕ್ಷಕಿ ಜಯಶ್ರೀ, ಸಂಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿದ ದಾಕ್ಷಾಯಿಣಿ ಆಳ್ವ, ಹಳೆ ವಿದ್ಯಾರ್ಥಿ ಝುಲ್ಫಿಕರ್ ಕಾಸಿಮ್‌ರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ಹಾಲಿ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರಾಂಶುಪಾಲೆ ಪ್ರಭಾ ನವೀನ್ ತಿಳಿಸಿದ್ದಾರೆ.







