ಸುಳ್ಯ : ಕುವೆಂಪು ಜನ್ಮದಿನಾಚರಣೆ ಅಂಗವಾಗಿ ವಿಶ್ವ ಮಾನವ ದಿನಾಚರಣೆ

ಸುಳ್ಯ, ಡಿ.29 : ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಕನ್ನಡ ಭವನದಲ್ಲಿ ನಡೆಯಿತು.-
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ಳಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ನರೆಂದ್ರ ರೈ ದೇರ್ಲ ದಿಕ್ಷೂಚಿ ಭಾಷಣ ಮಾಡಿದರು.
ಬೇಲಿ-ಗೋಡೆ ಇಲ್ಲದ ಜಗತ್ತಿನಲ್ಲಿ ಎಲ್ಲರಿಗೂ ಒಬ್ಬನೇ ಸೂರ್ಯ-ಚಂದ್ರ. ಅದನ್ನು ಕುವೆಂಪು ಅನಿಕೇತನ ಜಗತ್ತು ಎಂದಿದ್ದು. ಅಂತಹ ಜಗತ್ತನ್ನು ಯಾರು ಗೌರವಿಸುತ್ತಾರೋ, ಅಲ್ಲಿ ಬದುಕುವವರನ್ನು, ಸುಖಿಸುವವರನ್ನು, ಎಲ್ಲಾ ಮತ ಧರ್ಮ ಸಮುದಾಯ, ಇರುವೆಗಳೂ ಬದುಕಬೇಕು. ಅದನ್ನು ವಿಶ್ವಮಾನವತೆ ಎಂದು ಕುವೆಂಪು ಕರೆದದ್ದು ಎಂದರು.
ಕುವೆಂಪು ಬೇಟೆಗಾರರು ಎಂದು ಎಂದು ಹಲವರು ತಪ್ಪು ತಿಳಿದಿದ್ದಾರೆ. ಆದರೆ ಕುವೆಂಪು ಅವರು ಬೇಟೆಗಾರರಲ್ಲ. ಕಾಡಿನ ಕವಿ. ಕಾಡಿನ ಏಕಾಂತದಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿದವರು. ಬೇಟೆಯ ದಾರಿಯಲ್ಲಿ, ಹಿಂಸೆಯ ಚೀಲದಲ್ಲಿ ಅಹಿಂಸೆಯ ಪುಸ್ತಕ ಓದುತ್ತಿದ್ದರು ಎಂದವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್, ಉಪ ತಹಶೀಲ್ದಾರ್ ಲಿಂಗಪ್ಪ ನಾಯ್ಕ ಅತಿಥಿಗಳಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ವಂದಿಸಿದರು.
ನರಿಯಪ್ಪ ಮಠದ ಕಾರ್ಯಕ್ರಮ ನಿರೂಪಿಸಿದರು.







