Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನೋಟು ರದ್ದತಿ: ಅಡೆತಡೆಗಳ ಮೂಲ ಎಲ್ಲಿ?

ನೋಟು ರದ್ದತಿ: ಅಡೆತಡೆಗಳ ಮೂಲ ಎಲ್ಲಿ?

ಜೀನ್ ಡ್ರೀಝ್ಜೀನ್ ಡ್ರೀಝ್29 Dec 2016 11:38 PM IST
share
ನೋಟು ರದ್ದತಿ: ಅಡೆತಡೆಗಳ ಮೂಲ ಎಲ್ಲಿ?

ಈಗಾಗಲೇ ಸ್ಪಷ್ಟಪಡಿಸಿರುವಂತೆ ಇಡೀ ನೋಟು ರದ್ದತಿ ನಿರ್ಧಾರ, ಸಾಫ್ಟ್‌ವೇರ್ ಉದ್ಯಮಕ್ಕೆ ಅನಿರೀಕ್ಷಿತ ಪವಾಡಸದೃಶ ಅವಕಾಶಗಳನ್ನು ಸೃಷ್ಟಿಸಿಕೊಡುವ ಪ್ರಯತ್ನ ಎನ್ನುವುದನ್ನು ಉದ್ಯಮರಂಗವೇ ಸ್ಪಷ್ಟಪಡಿಸಿದೆ. ನಗದುರಹಿತ ಪಾವತಿಯಿಂದ ಕೆಲ ಪ್ರಯೋಜನಗಳಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗದು. ಆದರೆ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿ, ಏಕದೃಷ್ಟಿಯಿಂದ ಅದನ್ನು ಉತ್ತೇಜಿಸಬೇಕಾದ ಅನಿವಾರ್ಯತೆ ಸರಕಾರಕ್ಕೆ ಇಲ್ಲ.

ನೋಟು ರದ್ದತಿಯಿಂದಾದ ಅಡೆತಡೆ ಪರಿಣಾಮಗಳಿಗೆ ಇದೀಗ ಒಂದೊಂದಾಗಿ ಪುರಾವೆಗಳು ಸಿಗುತ್ತಿವೆ. ವಾಸ್ತವವಾಗಿ ಅಡಚಣೆ ಎನ್ನುವುದು ತೀರಾ ಸೌಮ್ಯ ಅಭಿವ್ಯಕ್ತಿ. ವಾಸ್ತವವಾಗಿ ಇದು ಬಹುತೇಕ ಮಂದಿಗೆ ಘೋರ ದುರಂತ. ಸೂಕ್ತ ಬೆಲೆ ಆಗ್ರಹಿಸಿ ರೈತರು ರಸ್ತೆ ಬದಿ ತರಕಾರಿಗಳನ್ನು ಸುರಿಯುತ್ತಿದ್ದಾರೆ; ವಲಸೆ ಕಾರ್ಮಿಕರು ಕೆಲಸವಿಲ್ಲದೇ ಮನೆಗಳಿಗೆ ವಾಪಸ್ಸಾಗಿದ್ದಾರೆ. ಬೀದಿಬದಿ ವ್ಯಾಪಾರಿಗಳು ಬೇಡಿಕೆ ಕುಸಿತದಿಂದ ಕಂಗಾಲಾಗಿದ್ದಾರೆ. ಬ್ಯಾಂಕ್ ಮುಂದೆ ದಿನವಿಡೀ ಸರದಿ ಸಾಲಿನಲ್ಲಿ ನಿಂತು ಬಳಲಿದ ಮಂದಿ ಕೊನೆಯುಸಿರೆಳೆದ ನಿದರ್ಶನಗಳೂ ನಮ್ಮ ಕಣ್ಣ ಮುಂದಿವೆ. ಬ್ಯಾಂಕ್‌ಗಳಲ್ಲಿ ನಗದು ಸಿಗದೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ.

ನೋಟು ರದ್ದತಿಯ ಅಡಚಣೆಗೆ ಇನ್ನೊಂದು ಮುಖವೂ ಇದೆ. ಉದಾಹರಣೆಗೆ ಬ್ಯಾಂಕಿಂಗ್ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿದೆ. ಪದೇ ಪದೇ ಬದಲಾಗುವ ನಿಯಮಾವಳಿ ಹಾಗೂ ಜನರು ತಮ್ಮದೇ ಸ್ವಂತ ದುಡಿಮೆಯ ಉಳಿತಾಯದ ಹಣವನ್ನು ಬ್ಯಾಂಕಿನಿಂದ ಪಡೆಯಲು ಕಟ್ಟುನಿಟ್ಟಿನ ನಿರ್ಬಂಧಗಳು ಎದುರಾಗಿರುವ ಹಿನ್ನೆಲೆಯಲ್ಲಿ, ಇಡೀ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆಯೇ ಜನರ ವಿಶ್ವಾಸ ಕಡಿಮೆಯಾಗುತ್ತಿದೆ. ಇನ್ನೊಂದು ಮುಖವೆಂದರೆ, ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಕ್ತ ಅಧಿಕಾರಗಳನ್ನು ಇತ್ತೀಚಿನ ವಾರಗಳಲ್ಲಿ ನೀಡಿದಾಗ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹರಡಲು ಅದು ಕಾರಣವಾಗಿಲ್ಲ.

ಆದರೆ ಆಘಾತಕಾರಿ ಅಂಶವೆಂದರೆ, ಈ ಮಹಾದುರಂತದ ಬಗ್ಗೆ ಅಧಿಕಾರರೂಢರಲ್ಲಿ ಕಿಂಚಿತ್ ಕಳಕಳಿಯೂ ಇಲ್ಲದಿರುವುದು. ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಧ್ವನಿ ಎತ್ತಲಾಗುತ್ತಿದ್ದು, ರಾಷ್ಟ್ರಕ್ಕಾಗಿ ಜನ ಇದನ್ನು ಸಹಿಸಿಕೊಳ್ಳಬೇಕು ಎಂಬ ಪುಕ್ಕಟೆ ಸಲಹೆಯೂ ಅಧಿಕಾರಸ್ಥರಿಂದ ಬರುತ್ತಿದೆ. ಆದರೆ ಜನರ ನೋವು ನಿವಾರಿಸುವ ಪ್ರಯತ್ನವಂತೂ ಆಗುತ್ತಿಲ್ಲ.

ಈ ಉದಾಸೀನತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅಡಚಣೆ ಎಂಬ ಪದಕ್ಕೆ ಧನಾತ್ಮಕ ಅರ್ಥವೂ ಕೆಲ ವಲಯಗಳಲ್ಲಿ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ತಾಂತ್ರಿಕ ಅನುಶೋಧನೆಯಲ್ಲಿ, ಇನ್ನೂ ನಿರ್ದಿಷ್ಟವಾಗಿ ಸಾಫ್ಟ್‌ವೇರ್ ಅನುಶೋಧನೆಯಲ್ಲಿ ಇಂಥ ಧನಾತ್ಮಕ ಅರ್ಥ ಇದೆ. ಉದಾಹರಣೆಗೆ ನಂದನ್ ನೀಲೇಕಣಿ ಕಳೆದ ಆಗಸ್ಟ್‌ನಲ್ಲಿ ಬ್ಯುಸಿನೆಸ್ ಸ್ಟ್ಯಾಂಡರ್ಡ್‌ಗೆ ನೀಡಿದ ಒಂದು ಸಂದರ್ಶನದಲ್ಲಿ, ‘‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಡಚಣೆ ಸಂಭವಿಸುವ ಕಾಲ ಸನ್ನಿಹಿತವಾಗಿದೆ’’ ಎಂದಿದ್ದರು. ಇದನ್ನು ಧನಾತ್ಮಕ ಅರ್ಥದಲ್ಲಿ ಅವರು ಬಳಸಿದ್ದರು. ಅದರ ಅರ್ಥ, ಹೊಸ ಹಣಕಾಸು ತಂತ್ರಜ್ಞಾನ ಅಡಿ ಇಡಲು ಅವಕಾಶ ಸೃಷ್ಟಿಯಾಗುತ್ತಿದೆ ಎನ್ನುವುದು ಗೂಡಾರ್ಥವಾಗಿತ್ತು.

ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವವರ ವಲಯದಲ್ಲಿ ಈ ‘ಅಡಚಣೆ’ ಎಂಬ ಪದ ಇಷ್ಟು ಜನಪ್ರಿಯವಾಗಲು ಕಾರಣವೆಂದರೆ, ಈ ಕ್ಷೇತ್ರದ ನೆಟ್‌ವರ್ಕ್ ಪರಿಣಾ ಮದ ಪಾತ್ರ. ಯಾವುದೇ ಹೊಸ ಸಾಫ್ಟ್‌ವೇರ್‌ಗಳನ್ನು ಜನ ಅಧಿಕ ಸಂಖ್ಯೆಯಲ್ಲಿ ಬಳಸಲು ಮುಂದಾದಾಗ ಮಾತ್ರ ಅದು ಕಾರ್ಯಸಾಧುವಾಗುತ್ತದೆ. ಇದಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಪ್ರಬಲ ಉತ್ಪನ್ನಕ್ಕೆ ಕೊಕ್ ನೀಡುವ ಕೆಲಸ ಆಗಬೇಕಾಗುತ್ತದೆ. ಇದಕ್ಕೆ ಒಂದು ರೀತಿಯ ತಡೆ ಸಂಭವಿಸಲೇಬೇಕಾಗುತ್ತದೆ. ಉದಾಹರಣೆಗೆ ಗೂಗಲ್ ಸರ್ಚ್ ಎಂಜಿನ್ ಬದಲಾಗಿ ಬೇರೆ ಆ ಜಾಗಕ್ಕೆ ಬರಬೇಕಾದರೆ, ಸರ್ಚ್ ಎಂಜಿನ್ ಜಗತ್ತಿನಲ್ಲಿ ದೊಡ್ಡ ರೂಪಾಂತರದ ಬದಲಾವಣೆ ಅಗತ್ಯವಿದೆ. ಅಂತೆಯೇ ಪೇಟಿಎಂ ಹಾಗೂ ಮೊಬಿಕ್ವಿಕ್‌ನಂಥ ನಗದು ರಹಿತ ಪಾವತಿವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ದೊಡ್ಡ ಸಂಖ್ಯೆಯ ಮಂದಿ ಈ ಹೊಸ ಉತ್ಪನ್ನವನ್ನು ಸ್ವೀಕರಿಸಿದಾಗ.

ಈ ದೃಷ್ಟಿಯಿಂದ ನೋಡಿದರೆ, ಆನ್‌ಲೈನ್ ಭದ್ರತಾ ಸೇವೆ ಸೇರಿದಂತೆ ನಗದುರಹಿತ ಪಾವತಿ ವ್ಯವಸ್ಥೆಗೆ ಸಂಬಂಧಿಸಿದಂತೆ, ನೋಟು ರದ್ದತಿ ನಿರ್ಧಾರದಿಂದ ವ್ಯಾಪಕ ಅವಕಾಶ ಸೃಷ್ಟಿಯಾಗಿದೆ. ಅಂದರೆ ನಗದುರಹಿತ ಪಾವತಿ ವ್ಯವಸ್ಥೆಯಲ್ಲಿ ಕಲ್ಪನೆಗೂ ನಿಲುಕದ ಸಾಧನೆ ಆಗಬೇಕು. ಕೇವಲ ಒಂದು ವರ್ಷದ ಹಿಂದೆ ನಗದು ರಹಿತ ಪಾವತಿ ವ್ಯವಸ್ಥೆಯ ಕಲ್ಪನೆಯೇ ಅಸಂಭವ ಎಂಬ ಸ್ಥಿತಿ ಇತ್ತು. ಆದರೆ ಇಂದು ಇದು ಎಲ್ಲರ ಗಮನ ಸೆಳೆದಿದೆ. ಕೇವಲ ನೋಟು ರದ್ದತಿಯ ಅಲೆಯಲ್ಲಿ ಈ ಹೊಸ ವ್ಯವಸ್ಥೆ ತೇಲುತ್ತಿರುವುದು ಮಾತ್ರವಲ್ಲದೆ, ಸರಕಾರ ಕೂಡಾ ಈ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದೆ. ಈ ಹೊಸ ವ್ಯವಸ್ಥೆಗೆ ಉತ್ತೇಜನ ನೀಡುವಂಥ ಜಾಹೀರಾತುಗಳನ್ನು ಸರಕಾರ ವಿವಿಧ ಇಲಾಖೆಗಳ ಮೂಲಕ ನೀಡುತ್ತಿದೆ.

ಅಡಚಣೆ ಹಾಗೂ ಅವಕಾಶ

ಸಮಸ್ಯೆ ಎಂದರೆ ಈ ಅಡಚಣೆಯ ಪರಿಭಾಷೆಯು ಜನಸಮಾನ್ಯರ ಮೇಲೆ ಕಷ್ಟದ ಹೊರೆಯನ್ನು ಹೇರಲು ಇದು ಸುಲಭದ ಲೈಸನ್ಸ್ ಆಗುತ್ತಿದೆ. ಬ್ಯಾಂಕ್ ಆವರಣದಲ್ಲಿ ಜನದಟ್ಟಣೆ ಇದೆಯೇ? ಅದ್ಭುತ, ಉತ್ತಮ ರೀತಿಯ ಅಡಚಣೆ ಎದುರಾಗಿದೆ. ಎಟಿಎಂ ಮುಂದಿನ ಸಾಲು ಬೆಳೆಯುತ್ತಿದೆಯೇ? ಹಾಗಲ್ಲ. ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆಯೇ? ಒಳ್ಳೆಯದು; ಈ ಅಡೆತಡೆಯು ಕೆಲ ಅಲ್ಪಾವಧಿ ಪೂರಕ ಹಾನಿಯನ್ನು ಮಾಡಬಲ್ಲದು. ವಸ್ತುನಿಷ್ಠವಾಗಿ ಮಾತನಾಡುವುದಾದರೆ, ಹೆಚ್ಚು ಅಡಚಣೆಗಳು ಸಂಭವಿಸಿದಷ್ಟೂ, ಪರಿಸ್ಥಿತಿಯ ಲಾಭ ಪಡೆದು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಅವಕಾಶವಾಗಿ ಇದನ್ನು ಮಾರ್ಪಡಿಸಿಕೊಳ್ಳಲು ಅವಕಾಶವಾಗುತ್ತದೆ. ಅವರು ಇಂಥ ಅಡಚಣೆಗಳು ಹುಟ್ಟಿಕೊಳ್ಳಲು ಕಾರಣ ಎಂಬ ಅರ್ಥವಲ್ಲ. ಇಂಥ ಅಡಚಣೆಯಿಂದ ಅವರು ಲಾಭ ಪಡೆಯುತ್ತಾರೆ ಎನ್ನುವುದು ವಾಸ್ತವ. ಭಾರತದಲ್ಲಿ ಸಾಫ್ಟ್‌ವೇರ್ ಉದ್ಯಮದ ಅದ್ಭುತ ಶಕ್ತಿಯನ್ನು ಪರಿಗಣಿಸಿದರೆ, ನೋಟು ರದ್ದತಿಯ ಅಡಚಣೆಗಳನ್ನು ಏಕೆ ಇಷ್ಟು ಲಘುವಾಗಿ ಪರಿಗಣಿಸಲಾಗುತ್ತಿದೆ ಎನ್ನುವುದು ಅರ್ಥವಾಗುತ್ತದೆ.

ಈ ಲಾಬಿಯ ಮುಂಚೂಣಿಯಲ್ಲಿರುವುದು, ನೀಲಕಣಿ ಮಾರ್ಗದರ್ಶನದ ಇಂಡಿಯನ್ ಸಾಫ್ಟ್ ವೇರ್ ಪ್ರಾಡೆಕ್ಟ್ ಇಂಡಸ್ಟ್ರಿ ರೌಂಡ್‌ಟೇಬಲ್. ಇದು ಬ್ಲ್ಯಾಕ್ ಬೆಲ್ಟ್ ಅನುಶೋಧಕರು ಹಾಗೂ ಉದ್ಯಮಶೀಲರ ಸಂಘ. ನಿಮಗೆ ಸಮಯವಿದ್ದರೆ ಅವರ ವೆಬ್‌ಸೈಟ್ ಮೇಲೆ ದೃಷ್ಟಿಹಾಯಿಸಿ. ಇದು ಖಂಡಿತವಾಗಿಯೂ ನಿಮ್ಮ ಕಣ್ಣು ತೆರೆಸುವಂಥದ್ದು. ಇವರು ನಿಜಕ್ಕೂ ಸ್ಮಾರ್ಟ್ ಹುಡುಗರು. ಅವರ ಯೋಚನೆ ದೊಡ್ಡದು. ಅವರಿಗೆ ಕಲ್ಪನೆಗಳಿವೆ. ಆದರೆ ವಾಸ್ತವ ಪ್ರಶ್ನೆಯೆಂದರೆ, ಯಾರಿಗಾಗಿ ಈ ಕಲ್ಪನೆಗಳು? ಐ-ಸ್ಪಿರಿಟ್‌ನ ಮೂಲ ಉದ್ದೇಶ ಭಾರತೀಯ ಸಾಫ್ಟ್ ವೇರ್ ಉದ್ಯಮಕ್ಕೆ ವ್ಯವಹಾರ ಅವಕಾಶಗಳನ್ನು ಸೃಷ್ಟಿಸುವುದು ಎನ್ನುವುದನ್ನು ವೆಬ್‌ಸೈಟ್ ಮುಚ್ಚುಮರೆ ಇಲ್ಲದೇ ಸ್ಪಷ್ಟಪಡಿಸುತ್ತದೆ. ಕೇವಲ ದೇಶದಲ್ಲಷ್ಟೇ ಅಲ್ಲ; ವಿಶ್ವವ್ಯಾಪಿಯಾಗಿ. ಉದಾಹರಣೆಗೆ ‘ವನ್ ಗೇಮ್ ಪ್ಲ್ಯಾನ್’ ಹೆಸರಿನ ಶೀರ್ಷಿಕೆಯಡಿ ವಿವರಿಸಿರುವಂತೆ, ‘‘ನಮ್ಮ ಮಹತ್ವಾಕಾಂಕ್ಷಿ ಗುರಿ ಎಂದರೆ, ಭಾರತದ ಎಸ್‌ಎಂಬಿ ವಲಯದಲ್ಲೇ ಸಾಫ್ಟ್‌ವೇರ್ ಉತ್ಪನ್ನಗಳನ್ನು ಸ್ವೀಕರಿಸುವ ಹೊಸ ಅಲೆಯನ್ನು ಸೃಷ್ಟಿಸುವುದು.’’ ಅಂದರೆ ಹೊಸಪೀಳಿಗೆಯ ಸಾಫ್ಟ್‌ವೇರ್ ಉತ್ಪನ್ನಗಳನ್ನು ಸೃಷ್ಟಿಸುವುದು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅಡೆ ತಡೆ ನಿರ್ಮಿಸುವುದು.

ಐ-ಸ್ಪಿರಿಟ್ ವೆಬ್‌ಸೈಟ್‌ನ ಪ್ರಕಾರ ಮೊದಲ ಹೆಜ್ಜೆ ಎಂದರೆ, ಸ್ಮಾರ್ಟ್ ಬೇಡಿಕೆ ಸಂಬಂಧಿ ವಲಯದ ಬದಲಾವಣೆಗೆ ಪ್ರಯತ್ನಿಸುವುದು. ಆಧಾರ್ ಕಾರ್ಡ್‌ಗಳನ್ನು ಸ್ವಇಚ್ಛೆಯ ಸೌಲಭ್ಯವಾಗಿ ಮಾರಾಟ ಮಾಡುವುದು ಅಥವಾ ಆಧಾರ್‌ನ ಮುಖ್ಯ ಉದ್ದೇಶ, ಕಲ್ಯಾಣ ಕ್ರಮಗಳನ್ನು ಸುಧಾರಿಸುವುದು ಎಂದು ಪ್ರತಿಪಾದಿಸುವುದು. ರಿತಿಕಾ ಖೇರಾ ಸರಣಿ ಲೇಖನಗಳಲ್ಲಿ ಪ್ರತಿಪಾದಿಸಿದಂತೆ, ಕಲ್ಯಾಣ ಯೋಜನೆಗಳಿಂದ ಆಧಾರ್‌ಗೆ ಲಾಭವಾಗಿದೆಯೇ ವಿನಃ ಆಧಾರ್‌ನಿಂದ ಕಲ್ಯಾಣ ಯೋಜನೆಗಳಿಗೆ ಲಾಭವಾಗಿಲ್ಲ ಎನ್ನುವುದು ವಾಸ್ತವ. ಉದಾಹರಣೆಗೆ ಆಧಾರ್ ಸಂಬಂಧಿತ ಪಡಿತರ ವ್ಯವಸ್ಥೆಗೆ ಬಯೋಮೆಟ್ರಿಕ್ ಮೂಲಕ ಅಧಿಕೃತತೆ ನೀಡುವ ಯೋಜನೆ ಜಾರ್ಖಂಡ್, ರಾಜಸ್ಥಾನದಂಥ ರಾಜ್ಯಗಳಲ್ಲಿ ಕೋಲಾಹಲ ಎಬ್ಬಿಸಿತು.

ಹಿತಾಸಕ್ತಿಗಳ ಮಿಲನ

ನಿಜಕ್ಕೂ ಆತಂಕಕಾರಿ ಅಂಶವೆಂದರೆ, ಇಂಥ ವ್ಯಾಪಾರಿ ಲಾಬಿಗಳ ಹಿತಾಸಕ್ತಿಯ ಜತೆಗೆ ಹೇಗೆ ಸರಕಾರಿ ನೀತಿಗಳನ್ನು ರೂಪಿಸಲಾಗುತ್ತದೆ ಎನ್ನುವುದು. ನಗದು ರಹಿತ ಪಾವತಿ ವ್ಯವಸ್ಥೆಯ ಕುರಿತ ಸರಕಾರಿ ಜಾಹೀರಾತುಗಳು, ಖಾಸಗಿ ಕಂಪೆನಿಗಳ ಜಾಹೀರಾತಿನ ಪುನರಾವರ್ತನೆಯಂತಿರುವುದು. ಅಂದರೆ ಸರಕಾರಿ ಜಾಹೀರಾತುಗಳಿಂದಾಗಿ ಖಾಸಗಿ ಕಂಪೆನಿಗಳ ಮಾರುಕಟ್ಟೆ ವೆಚ್ಚ ಕಡಿಮೆಯಾಗುತ್ತಿದೆ. ಸರಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಆವರ್ತದ್ವಾರಗಳು ದಿನದಿಂದ ದಿನಕ್ಕೆ ಅಗಲವಾಗುತ್ತಿವೆ. ಈಗಾಗಲೇ ಸ್ಪಷ್ಟಪಡಿಸಿರುವಂತೆ ಇಡೀ ನೋಟು ರದ್ದತಿ ನಿರ್ಧಾರ, ಸಾಫ್ಟ್‌ವೇರ್ ಉದ್ಯಮಕ್ಕೆ ಅನಿರೀಕ್ಷಿತ ಪವಾಡಸದೃಶ ಅವಕಾಶಗಳನ್ನು ಸೃಷ್ಟಿಸಿಕೊಡುವ ಪ್ರಯತ್ನ ಎನ್ನುವುದನ್ನು ಉದ್ಯಮರಂಗವೇ ಸ್ಪಷ್ಟಪಡಿಸಿದೆ.

ನಗದುರಹಿತ ಪಾವತಿಯಿಂದ ಕೆಲ ಪ್ರಯೋಜನಗಳಿವೆ ಎನ್ನುವುದನ್ನು ಯಾರೂ ಅಲ್ಲಗಳೆಯಲಾಗದು. ಆದರೆ ಆರ್ಥಿಕತೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿ, ಏಕದೃಷ್ಟಿಯಿಂದ ಅದನ್ನು ಉತ್ತೇಜಿಸಬೇಕಾದ ಅನಿವಾರ್ಯತೆ ಸರಕಾರಕ್ಕೆ ಇಲ್ಲ.

ಕೃಪೆ: ದ ಹಿಂದೂ

share
ಜೀನ್ ಡ್ರೀಝ್
ಜೀನ್ ಡ್ರೀಝ್
Next Story
X