ಎಸ್ಸೆಸೆಫ್ ಮೆಜೆಸ್ಟಿಕ್ ಶಾಖಾ ವಾರ್ಷಿಕ ಮಹಾಸಭೆ

ಬೆಂಗಳೂರು, ಡಿ.30: ಎಸ್ಸೆಸೆಫ್ ಮೆಜೆಸ್ಟಿಕ್ ಶಾಖಾ ಇದರ ವಾರ್ಷಿಕ ಮಹಾಸಭೆಯು ಡಿ.27ರಂದು ಶಾಫಿ ಸಹದಿ ಉಸ್ತಾದ್ ಪೊಯ್ಯತ್ತಬೈಲ್ ಇವರ ಅಧ್ಯಕ್ಷತೆಯಲ್ಲಿ ವಿಸ್ಡಮ್ ಹೋಮ್ಸ್ ಮೆಜೆಸ್ಟಿಕ್ ನಲ್ಲಿ ನಡೆಯಿತು .
ಡಿವಿಷನ್ ಅಧ್ಯಕ್ಷರಾದ ಹನೀಫ್ ಮದನಿ ಕುಂಡಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಖಾ ಅಧ್ಯಕ್ಷ ಶಾಫಿ ಸಹದಿ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಕಾರ್ಯದರ್ಶಿ ಫರ್ಹಾತ್ ರವರು ವಾರ್ಷಿಕ ವರದಿಯನ್ನು ವಾಚಿಸಿ ,ಕೋಶಾಧಿಕಾರಿ ನೌಫಾಲ್ ಆಡೋರರವರು ವಾರ್ಷಿಕ ಲೆಕ್ಕ ಪಾತ್ರವನ್ನು ಮಂಡಿಸಿದರು .ಆ ಬಳಿಕ ಎಲ್ಲರ ಒಪ್ಪಿಗೆ ಮೇರೆಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಶಾಫಿ ಸಹದಿ ಪೊಯ್ಯತ್ತಬೈಲ್, ಉಪಾಧ್ಯಕ್ಷರುಗಳಾಗಿ ಶಫ್ದರ್ ಹುಸೈನ್ ಮಂಗಳೂರು, ಹನೀಫ್ ಕಾಯರ್,
ಪ್ರಧಾನ ಕಾರ್ಯದರ್ಶಿಯಾಗಿ ಫರಾಹತ್ ಮುದುಂಗಾರ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಇರ್ಫಾನ್ ಬಜ್ಪೆ,ಶಂಸುದ್ದೀನ್ ಗಾಂಜಾಲ್, ಕೋಶಾಧಿಕಾರಿಯಾಗಿ ರಫೀಕ್ ಕುಂಡಾಜೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸೈಫುದ್ದೀನ್ ಪಾಲಕ್ಕಾಡ್ ಹಾಗೂ ಎಂಟು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು .
ಸಮಿತಿಗೆ ಎಸ್ಸೆಸೆಫ್ ಧ್ವಜ ಹಸ್ತಾಂತರಿಸುವುದರೊಂದಿಗೆ ಸಮಿತಿಗೆ ಚಾಲನೆ ನೀಡಲಾಯಿತು .ಕಾರ್ಯಕ್ರಮದಲ್ಲಿ ಹಾರಿಸ್ ಮದನಿ ಮಲ್ಲೇಶ್ವರಂ, ಅಖ್ತರ್, ಉಮರ್ ಮದನಿ ಹಾಗೂ ಎಸ್ಸೆಸೆಫ್ ಕಾರ್ಯಕರ್ತರು ಭಾಗವಹಿಸಿದ್ದರು. ಶಾಖಾ ಕಾರ್ಯದರ್ಶಿ ಫರ್ಹಾತ್ ಸ್ವಾಗತಿಸಿ, ಶಂಸು ಗಾಂಜಾಲ್ ವಂದಿಸಿದರು.







