ಗಲ್ಫ್‌ನಲ್ಲಿ ಸೋಮವಾರ ಪೇಟೆ ಯುವತಿಯ ಮಾರಾಟ: ದೂರು

ಕ್ಯಾಲಿಕಟ್,ಡಿ.30: ಏಜೆಂಟ್ ಮೂಲಕ ಕೆಲಸಕ್ಕಾಗಿ ಸೌದಿ ಅರೇಬಿಯಕ್ಕೆ ಕಳುಹಿಸಲಾಗಿದ್ದ ಕರ್ನಾಟಕದ ಯುವತಿಯನ್ನು ದಮ್ಮಾಮ್‌ನ ಲ್ಲಿ ಒಬ್ಬ ಅರಬನಿಗೆ ಮಾರಾಟ ಮಾಡಲಾಗಿತ್ತು ಎಂದು ದೂರು ನೀಡಲಾಗಿದೆ. ಸಂತ್ರಸ್ತ ಯುವತಿ ಕರ್ನಾಟಕ ಕೊಡಗಿನ ಸೊಮವಾರ ಪೇಟೆ ಕುಶಾಲನಗರದ ನಿವಾಸಿಯಾಗಿದ್ದು, ಅವರು ಕ್ಯಾಲಿಕಟ್ ಉತ್ತರ ವಲಯ ಎಡಿಜಿಪಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಪುದಿಯರ ಎಂಬಲ್ಲಿನ ಟ್ರಾವೆಲ್ ಏಜೆಂಟ್ ತನ್ನನ್ನು ದಮಾಮ್‌ಗೆ ಕಳುಹಿಸುತ್ತಿದ್ದರು. ಅಲ್ಲಿನ ಅರಬನಿಗೆ ತನ್ನನ್ನು ಮಾರಾಟ ಮಾಡಿಲಾಗಿದೆ ಎಂದು ನೊಂದ ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ತನ್ನನ್ನು ಖರೀದಿಸಿದ್ದ ಅರಬ ವ್ಯಕ್ತಿ ತನಗೆ ಒಂದು ತಿಂಗಳು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ. ಅಲ್ಲಿಂದ ಪಾರಾಗಿ ಊರಿಗೆ ಬಂದು ಕಸಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆದರೆ ಕ್ರಮ ಜರಗಿಸಲಾಗಿಲ್ಲ ಎಂದು ಯುವತಿ ತಿಳಿಸಿದ್ದಾರೆ. ಯುವತಿಯ ದೂರು ಸ್ವೀಕೃತವಾಗಿದೆ ಎಂದು ಎಡಿಜಿಪಿ ಕಚೇರಿ ತಿಳಿಸಿದೆ.
Next Story





