ಮೋದಿ ಅರ್ಥವ್ಯವಸ್ಥೆಯನ್ನಲ್ಲ, ಜನರನ್ನು ಕ್ಯಾಶ್‌ಲೆಸ್ ಮಾಡಿದ್ದಾರೆ: ವಿ.ಎಸ್. ಅಚ್ಯುತಾನಂದನ್

ತಿರುವನಂತಪುರಂ,ಡಿ. 30: ನೋಟು ನಿಷೇಧ ಜನರಲ್ಲುಂಟುಮಾಡಿದ ಬವಣೆಯನ್ನು ಮುಂದಿರಿಸಿ ಎಡ ಪಕ್ಷ ಆಯೋಜಿಸಿದ್ದ ಮಾನವ ಸಂಕಲೆಯಲ್ಲಿ ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಮೋದಿಗೆ ಮಾತಿನ ಚಾಟಿ ಬೀಸಿದ್ದಾರೆ. ಜನರನ್ನು ಮೋದಿ ಕ್ಯಾಸ್‌ಲೆಸ್ ಮಾಡಿದ್ದಾರೆ. ಅರ್ಥವ್ಯವಸ್ಥೆಯನ್ನು ಮಾಡಿಲ್ಲ ಎಂದು ಅವರು ಟೀಕಿಸಿದರು.
ಸಾಮಾನ್ಯ ನಾಗರಿಕರು ದುಡಿದ ಹಣ ಬ್ಯಾಂಕ್‌ನಲ್ಲಿ ತಡೆದಿಟ್ಟು, ಉದ್ಯಮಿಗಳ ನಲ್ವತ್ತು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಐವತ್ತು ದಿವಸದಲ್ಲಿ ಪರಿಸ್ಥಿತಿ ಸಾಮಾನ್ಯಗೊಳ್ಳಲಿದೆ. ನೋಟು ಅಮಾನ್ಯ ಕ್ರಮ ವಿಫಲವಾದರೆ ಗಲ್ಲಿಗೇರಿಸಿ ಎಂದು ಮೋದಿ ಹೇಳಿದ್ದರು. ಇಂತಹ ಮಾತುಗಳನ್ನೆ ಮೋದಿ ಹೇಳಿ ತಿರುಗಾಡುತ್ತಿದ್ದಾರೆ ಎಂದು ವಿಎಸ್‌ಅಚ್ಯುತಾನಂದನ್ ಟೀಕಿಸಿದ್ದಾರೆ.
ಬಾಯಿಯೋಂ,ಬೆಹನೋಂ ಎಂದು ಬೊಬ್ಬೆ ಹೊಡೆದು ಜನರನ್ನು ವಂಚಿಸುತ್ತಿದ್ದಾರೆ. ಅರ್ಥವ್ಯವಸ್ಥೆಯನ್ನಲ್ಲ ಜನರನ್ನೇ ಮೋದಿ ಕ್ಯಾಶ್ ಲೆಸ್ ಮಾಡಿದರು. ದೇಶಕ್ಕಾಗಿ ಕುಟುಂಬವನ್ನು ತ್ಯಜಿಸಿದೆ ಎಂದು ಮೋದಿ ಹೇಳುತ್ತಾರೆ. ಆದರೆ, ಅದರಿಂದಾಗಿ ಆಕುಟುಂಬ ಪಾರಾಯಿತು. ಇಡೀ ದೇಶದಲ್ಲಿ ಮೋದಿ ಹೊಂಡ ತೋಡಿದರು’ ಎಂದು ಅಚ್ಯುತಾನಂದನ್ ತನ್ನ ಶೈಲಿಯಲ್ಲಿ ಮೋದಿ ವಿರುದ್ಧ ಮಾತಿನ ಪ್ರಹಾರ ಹರಿಸಿದರು ಎಂದು ವರದಿಯಾಗಿದೆ.





