ಹನಾ ಕಾಝಿಯಾ, ಖದೀಜಾ ರುಕ್ನುದ್ದೀನ್ ಗೆ ಚಿನ್ನದ ಪದಕ

ಭಟ್ಕಳ , ಡಿ.30 : ಇಲ್ಲಿನ ಜಾಮಿಯಾಬಾದ್ ರಸ್ತೆಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಬಾಲಕೀಯರ ವಿಭಾಗದಲ್ಲಿ ಹನಾ ಕಾಝಿಯಾ ಹಾಗೂ ಖದೀಜಾ ರುಕ್ನುದ್ದೀನ್ ರಿಗೆ ಪ್ರತಿಷ್ಠಿತ ನಜ್ಮೆ ಇಖ್ವಾನ್ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಪದಕ ಪ್ರದಾನ ಮಾಡಿ ಮಾತನಾಡಿದ ಕಾರವಾರ ಜಿಲ್ಲಾಧಿಕಾರಿ ಕಚೇರಿಯ ಐ.ಎ.ಎಸ್ ಪ್ರೋಬೇಷನರಿ ಅಧಿಕಾರಿ ಫೌಝೀಯಾ ತರನ್ನುಮ್, ವಿದ್ಯಾರ್ಥಿನಿಯರಲ್ಲಿರುವ ಪ್ರತಿಭೆಯನ್ನು ಪೋಷಿಸಿ ಬೆಳೆಸುವುದು ಪಾಲಕ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಸಮುದಾಯದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುವಂತೆ ಅವರು ಮಹಿಳೆಯರಿಗೆ ಕರೆ ನೀಡಿದರು.
ಪ್ರಾಂಶುಪಾಲೆ ಫಹಮಿದ ಡಾಟಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Next Story





