ಪಡುಬಿದ್ರಿ : ಕಂಪಾಶನೇಟ್ ಫ್ರೆಂಡ್ಸ್ ಅಸೋಸಿಯೇಶನ್ ಉದ್ಘಾಟನೆ

ಪಡುಬಿದ್ರಿ , ಡಿ.30 : ಸಮಾಜ ಸೇವೆಗೆ ಎರಡು ಮುಖಗಳಿದ್ದು, ಪರ, ವಿರೋಧಗಳು ಸಾಮಾನ್ಯವಾಗಿದೆ. ಜನಸಾಮಾನ್ಯರ ನೋವು, ಸಂಕಷ್ಟಗಳ ತಿಳುವಳಿಕೆ ಇದ್ದಾಗ ಸೇವೆಗೆ ಮನಸ್ಥಿತಿ ಒಗ್ಗಿಕೊಳ್ಳುತ್ತದೆ ಎಂದು ಕರ್ನಾಟಕ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನುಡಿದರು.
ಅವರು ಶುಕ್ರವಾರ ಮುದರಂಗಡಿ ಚರ್ಚ್ ಸಭಾಂಗಣದಲ್ಲಿ ಕಂಪಾಶನೇಟ್ ಫ್ರೆಂಡ್ಸ್ ಅಸೋಸಿಯೇಶನ್ ಮುದರಂಗಡಿ ಇದರ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು .
ಸೇವೆಯಲ್ಲಿ ಸ್ವತ: ತೊಡಗಿಸಿಕೊಂಡು, ಸಂಕಷ್ಟದಲ್ಲಿರುವವರಿಗೆ ಪ್ರೀತಿಯನ್ನು ನೀಡಿದಾಗ ಅದು ದೇವರ ಸೇವೆಯಾಗುತ್ತದೆ. ಸೇವೆಯಿಂದ ಸ್ಥಾನಮಾನ ಕೀರ್ತಿಯೂ ಲಭಿಸುತ್ತದೆ. ಸೇವೆಯ ಪ್ರಥಮ ಆದ್ಯತೆ ತಮ್ಮ ತವರೂರಿಗೆ ನೀಡುವ ಮೂಲಕ ತಾಯ್ನೆಲದ ಮಣ್ಣಿನ ಋಣ ತೀರಿಸುವುದು ನಮ್ಮ ಕರ್ತವ್ಯ. ಗುರಿ ಮತ್ತು ಚಿಂತನೆಗಳು ಪೂರಕವಾದಾಗ ಮಾತ್ರ ಕಾರ್ಯದಲ್ಲಿ ಯಶಸ್ಸು ಸಾಧ್ಯ ಎಂದರು.
Next Story





