ಹಿಂದಿನದನ್ನು ಮರೆತು ಮುಂದೆ ಹೋಗುವ: ಟ್ರಂಪ್

ಪಾಮ್ ಬೀಚ್ (ಅಮೆರಿಕ), ಡಿ. 30: ರಶ್ಯದ ವಿರುದ್ಧ ಅಮೆರಿಕ ತೆಗೆದುಕೊಂಡಿರುವ ದಂಡನಾತ್ಮಕ ಕ್ರಮಗಳಿಗೆ ಪ್ರತಿಕ್ರಿಯಿಸಿರುವ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ದೇಶ ‘ಹಿಂದಿನದನ್ನು ಮರೆತು ಮುಂದೆ ಹೋಗಬೇಕು’ ಎಂಬುದಾಗಿ ಕರೆ ನೀಡಿದ್ದಾರೆ.
ಅದೇ ವೇಳೆ, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ತಾನು ಒಂದೊಮ್ಮೆ ಕಟುವಾಗಿ ಟೀಕಿಸಿದ್ದ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
‘‘ದೊಡ್ಡ ಮತ್ತು ಉತ್ತಮ ವಿಷಯಗಳತ್ತ ಮುಂದುವರಿಯಲು ನಮ್ಮ ದೇಶಕ್ಕೆ ಇದು ಸರಿಯಾದ ಸಮಯ’’ ಎಂದು ಟ್ರಂಪ್ ಹೇಳಿದರು.
‘‘ಆದಾಗ್ಯೂ, ನಮ್ಮ ದೇಶ ಮತ್ತು ಅದರ ಶ್ರೇಷ್ಠ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವ ಸಂಗತಿಗಳನ್ನು ಅರಿಯುವುದಕ್ಕೆ ನಮ್ಮ ಬೇಹುಗಾರಿಕಾ ಬಳಗದ ಮುಖ್ಯಸ್ಥರನ್ನು ಮುಂದಿನ ವಾರ ಭೇಟಿಯಾಗಲಿದ್ದೇನೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
Next Story





