ಭಟ್ಕಳ: ಲಂಕಾ ಅಬ್ದುಲ್ಲಾ ಗೌರವಾರ್ಥ ಮುಷಾಯಿರಾ

ಭಟ್ಕಳ,ಡಿ.30: ಇಲ್ಲಿನ ನವಾಯತ್ ಸಮುದಾಯದ ಮುಖಂಡ, ಹಲವು ಸಂಘ ಸಂಸ್ಥೆಗಳ ಸ್ಥಾಪಕ ಹಾಗೂ ನವಾತ್ ಮಹೆಫಿಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸೈಯದ್ ಅಬ್ದುಲ್ಲಾ ಲಂಕಾರ ಗೌರವಾರ್ಥ ಇದಾರೆ ಅದಬೆ ಇಸ್ಲಾಮಿ ಸಾಹಿತ್ಯಿಕ ಸಂಘಟನೆಯು ಗುರುವಾರ ರಾತ್ರಿ ಜಾಮಿ ಯಾಬಾದ್ ನಲ್ಲಿರುವ ಶಮ್ಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಉರ್ದು ಮುಷಾಯಿರಾ ಆಯೋಜಿಸಿತ್ತು. ಮುಷಾಯಿರಾ ಅಧ್ಯಕ್ಷತೆಯನ್ನು ನದ್ವತುಲ್ ಉಲಮಾ ಲಕ್ನೋದ ಪ್ರಾಧ್ಯಾಪಕ ಮೌಲಾನ ರಯೀಸುಸ್ ಶಾಕಿರಿ ನದ್ವಿ ವಹಿಸಿದ್ದರು.
ಅತಿಥಿ ಕವಿಗಳಾದ ಮಝಹರ್ ಮುಹಿಯುದ್ದೀನ್ ಹುಬ್ಬಳ್ಳಿ, ವೆಂಕಪ್ಪಕಾಮಿಲ್ ಕಲಾದ್ಗಿ ಹುಬ್ಬಳ್ಳಿ, ಮುಸರ್ರತ್ ಪಾಷಾ ರಾಹಿ ಶಿವಮೊಗ್ಗ, ಅರ್ಖಮ್ ಮರಹರಿ ಕೊಪ್ಪಳ ಹಾಗೂ ಸ್ಥಳೀಯ ಕವಿಗಳಾದ ಸೈಯದ್ ಅಶ್ರಫ್ ಬರ್ಮಾವರ್, ಇಕ್ಬಾಲ್ ಸಯೀದಿ, ಅಬ್ದುಲ್ ಅಲೀಮ್ ಶಾಹಿನ್, ಸೈಯದ್ ಸಾಲಿನದ್ವಿ ಬರ್ಮಾವರ್, ಹನೀಫ್ ಶಾ ಶಬ್ನಮ್, ಇಬ್ನೆ ಹಸನ್, ಮೌಲ್ವಿ ಅಬ್ದು ಲ್ ಮುಘ್ನಿ ಅಕ್ರಮಿ ಹಾಗೂ ಇದಾರೆ ಅದಬೆ ಇಸ್ಲಾಮಿ ಸಂಸ್ಥೆಯ ಅಧ್ಯಕ್ಷ ಡಾ.ಮುಹಮ್ಮದ್ ಹನೀಫ್ ಶಬಾಬ್ ಭಾಗವಹಿಸಿ ತಮ್ಮ ಕವನಗಳ ಮೂಲಕ ಸಾಹಿತ್ಯಾಸಕ್ತರ ಮನ ತಣಿಸಿದರು.
ಈ ಸಂದರ್ಭದಲ್ಲಿ ಸೈಯದ್ ಲಂಕಾ ಅಬ್ದುಲ್ಲಾ ಅವರಿಗೆ ಸಾಹಿತ್ಯಿಕ ಸಂಘ ಸಂಸ್ಥೆಗಳಿಗೆ ನೀಡಿದ ಪ್ರೋತ್ಸಾಹ, ಸಹಕಾರವನ್ನು ಸ್ಮರಿಸಿ ಗೌರವಾರ್ಥ ಅಭಿನಂದನಾ ಪತ್ರ ನೀಡುವುದರ ಮೂಲಕ ಸನ್ಮಾನಿಸಲಾಯಿತು.





