ಕರ್ಣಾಟಕ ಬ್ಯಾಂಕ್‌ನ ನೂತನ ನಿರ್ದೇಶಕರಾಗಿ ಡಿ.ಸುರೇಂದ್ರ ಕುಮಾರ್ ನೇಮಕ

ಮಂಗಳೂರು, ಡಿ.30:ಕರ್ಣಾಟಕ ಬ್ಯಾಂಕ್ ನೂತನ ಹೆಚ್ಚುವರಿ ನಿರ್ದೇಶಕರಾಗಿ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾಗಿ ಹಾಗೂ ಕಳೆದ 25ವರುಷಗಳಿಂದ ಧರ್ಮಸ್ಥಳ ದ ಎಸ್‌ಕೆಡಿಆರ್‌ಡಿಪಿಯ ಟ್ರಸ್ಟಿಯಾಗಿ , ಸಣ್ಣ ಕೈಗಾರಿಕಾ ಉದ್ಯಮದ ಕಾರ್ಯನಿರ್ವಹಣೆಯ ಅನುಭವ ಹೊಂದಿರುವ ಡಿ .ಸುರೇಂದ್ರ ಕುಮಾರ್ ಡಿ.29ರಂದು ಬ್ಯಾಂಕಿನ ಆಡಳಿತ ಮಂಡಳಿಯ ಸಭೆ ಹೆಚ್ಚುವರಿ ನಿರ್ದೇಶಕರನ್ನಾಗಿ ಆಯ್ಕೆಮಾಡಿದೆ.
ಡಿ. ಸುರೇಂದ್ರ ಕುಮಾರ್ ಎಸ್‌ಡಿಎಂ ಫಾರ್ಮಸಿ,ಪದ್ಮಲತಾ ಟ್ರಾನ್ಸ್ ಪೋರ್ಟ್, ಕುಡುಮಾ ಇಂಡಸ್ಟ್ರೀಸ್ ಸಂಸ್ಥೆಯ ಆಡಳಿತ ಪಾಲುದಾರರಾಗಿದ್ದು,ಸೆ.25,2000ದಿಂದ ಸೆ.24,2008ರವರೆಗೆ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರಾಗಿಯೂ ಅನುಭವ ಹೊಂದಿವರಾಗಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
Next Story





