ಜ.5: ಮುಲ್ಕಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
ಮುಲ್ಕಿ, ಡಿ.30: ಕನ್ನಡ ಸಾಹಿತ್ಯ ಪರಿಷತ್ ಮುಲ್ಕಿ ಹೋಬಳಿಯ ಕನ್ನಡ ಸಾಹಿತ್ಯ ಸಮ್ಮೇಳನವು ಜ.5ರಂದು ಮುಲ್ಕಿಯ ವಿಜಯ ಕಾಲೇಜಿನ ಸಭಾಭವನದಲ್ಲಿ ಜರಗಲಿದೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಮುಲ್ಕಿ ವಿಜಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಶೈಲಜಾ ಏತಡ್ಕ ವಹಿಸುವರು. ಪೂರ್ವಾಹ್ನ 11ರಿಂದ ಮಧ್ಯಾಹ್ನ 12:30ರವರೆಗೆ ಗೋಷ್ಠಿ ನಡೆಯಲಿದೆ. ಮಧ್ಯಾಹ್ನಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಬಳಿಕ ಜರಗಲಿರುವ ಸನ್ಮಾನ ಸಮಾರಂಭದಲ್ಲಿ ನಾಟಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗ್ಯೆದ ಪತ್ರಕರ್ತ ಶರತ್ ಶೆಟ್ಟಿ, ಸಾಹಿತ್ಯ ಕ್ಷೇತ್ರದ ಹರಿಶ್ಚಂದ್ರ ಪಿ.ಸಾಲ್ಯಾನ್, ವ್ಯೆದ್ಯಕೀಯ ಕ್ಷೇತ್ರದ ಡಾ.ಜೀವಿತಾ ಕಿನ್ನಿಗೋಳಿ ಮತ್ತು ಸ್ಮಶಾನ ನಿರ್ವಹಣೆಯ ಮಾಧವ ಕೆರೆಕಾಡು ಅವರನ್ನು ಸನ್ಮಾನಿಸಲಾಗುವುದು. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





