ವಿಕಲಚೇತನ ಪ್ರಯಾಣಿಕರಿಗೆ ರಿಯಾಯಿತಿ ದರ
ಮಂಗಳೂರು, ಡಿ.30: ಕರಾರಸಾ ಸಂಸ್ಥೆಯು ವಿಕಲಚೇತನ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿ 2017ನೆ ಸಾಲಿನಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ ಪಾಸ್‌ಗಳನ್ನು ವಿತರಿಸಲಿದೆ. ಈಗಾಗಲೇ ನೀಡಿರುವ ಪಾಸ್‌ಗಳನ್ನು ಜ.2ರಿಂದ ನವೀಕರಿಸಬಹುದಾಗಿದೆ. ಅಲ್ಲದೆ ಹೊಸ ಪಾಸ್‌ಗಳನ್ನು ಪಡೆಯಬಹುದು. ಸದ್ಯ 2016ನೆ ಸಾಲಿನಲ್ಲಿ ವಿತರಿಸಿದ ಪಾಸ್‌ಗಳನ್ನು ಫೆ.28ರವರೆಗೆ ಮಾನ್ಯ ಮಾಡಲಾಗುವುದು. ಅರ್ಜಿಯೊಂದಿಗೆ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ 660 ರೂ. ಸಲ್ಲಿಸಬೇಕು. ವಿಕಲಚೇತನರು ಸರಕಾರಿ ನೌಕರಿಯಲ್ಲಿದ್ದಲ್ಲಿ ರಿಯಾಯಿತಿ ದರದ ಬಸ್ ಪಾಸ್ ನೀಡಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story





