ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಗಳೂರು, ಡಿ.30: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಡಿ.31ರಂದು ಜಿಲ್ಲಾ ಪ್ರವಾಸದಲ್ಲಿರುವರು.
ಬೆಳಗ್ಗೆ 9ಕ್ಕೆ ಮಂಗಳೂರು ಕರಾವಳಿ ಮೈದಾನದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಜರಗುವ ಹಾಕಿ ಕ್ರೀಡೋತ್ಸವದ ಉದ್ಘಾಟನೆ, 10ಕ್ಕೆ ಕನ್ಯಾನ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಅಪರಾಹ್ನ 2:30ರಿಂದ ಸಂಜೆ 5:30ರವರೆಗೆ ಎಲಿಯ ನಡುಗೋಡು, ಕೊಯಿಲ, ಉಳಿ, ಮಣಿನಾಲ್ಕೂರು ಹಾಗೂ ಸರಪಾಡಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





