ಮಂಗಳೂರು-ದುಬೈ ಜೆಟ್ ಏರ್ವೇಸ್ ವಿಳಂಬ?
ಮಂಗಳೂರು, ಡಿ. 31: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ರಾತ್ರಿ 11:25 ಗಂಟೆಗೆ ಮಂಗಳೂರಿನಿಂದ ದುಬೈಗೆ ಹೊರಡಬೇಕಾಗಿದ್ದ ಜೆಟ್ ಏರ್ವೇಸ್ ವಿಮಾನ ವಿಳಂಬವಾಗುವ ಸಾಧ್ಯತೆ ಬಗ್ಗೆ ಆತಂಕಗೊಂಡಿರುವ ಪ್ರಯಾಣಿಕರು ಈ ಕುರಿತು ಮುನ್ಸೂಚನೆ ನೀಡದ ಏರ್ವೇಸ್ ವಿರುದ್ಧ ಕಿಡಿಗಾರಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಿಂದ ರಾತ್ರಿ 11:25ಕ್ಕೆ ಹೊರಡಬೇಕಾಗಿದ್ದ 9ಡಬ್ಲು532 ವಿಮಾನದ ಪ್ರಯಾಣಿಕರು ಮೂರು ಗಂಟೆ ಮುಂಚಿತವಾಗಿಯೇ ಬಂದಿದ್ದು, ವಿಮಾನ ವಿಳಂಬವಾಗುವ ಬಗೆಗಿನ ಮಾಹಿತಿಯಿಂದ ಗಾಬರಿಗೊಂಡಿದ್ದಾರೆ. ವಿಮಾನವು ಹೊರಡಲು ತುಸು ವಿಳಂಬವಾಗಬಹುದು ಇಲ್ಲವೇ ರದ್ದಾಗಬಹುದೆಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪ್ರಯಾಣಿಕರು ಏರ್ವೇಸ್ನ ಸಿಬ್ಬಂದಿಯನ್ನು ವಿಚಾರಿಸಲು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.
ಇಂದು ದುಬೈಗೆ ಹೊರಡಬೇಕಾದ ವಿಮಾನವು ರದ್ದುಗೊಂಡಲ್ಲಿ ಅದೇ ಪ್ರಯಾಣಿಕರನ್ನು ರವಿವಾರ ಮಧ್ಯಾಹ್ನ 3:15ಕ್ಕೆ ಅಥವಾ ರವಿವಾರ ರಾತ್ರಿ 11:25ಕ್ಕೆ ಹೊರಡುವ ಜೆಟ್ ಏರ್ವೇಸ್ ವಿಮಾನದಲ್ಲಿ ಕಳುಹಿಸುವ ಬಗ್ಗೆಯೂ ಹೇಳಲಾಗುತ್ತಿದ್ದು, ಪ್ರಯಾಣಿಕರಲ್ಲಿ ಗೊಂದಲ ಮೂಡಿದೆ.