ವರ್ಲ್ಡ್ ಟೆನಿಸ್ ಚಾಪಿಯನ್‌ಶಿಪ್: ನಡಾಲ್‌ಗೆ ಟ್ರೋಫಿ

ಅಬುಧಾಬಿ, ಡಿ.31: ಸ್ಪೇನ್ ಆಟಗಾರ ರಫೆಲ್ ನಡಾಲ್ ಮುಬಾಡಾಲಾ ವರ್ಲ್ಡ್ ಟೆನಿಸ್ ಚಾಪಿಯನ್‌ಶಿಪ್‌ನಲ್ಲಿ ನಾಲ್ಕನೆ ಬಾರಿ ಪ್ರಶಸ್ತಿ ಜಯಿಸುವ ಮೂಲಕ 2016ನೆ ವರ್ಷವನ್ನು ಸಂಭ್ರಮದಿಂದ ಕೊನೆಗೊಳಿಸಿದರು.
ಶನಿವಾರ ಇಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 30ರ ಪ್ರಾಯದ ನಡಾಲ್ 11ನೆ ರ್ಯಾಂಕಿನ ಬೆಲ್ಜಿಯಂನ ಡೇವಿಡ್ ಗಾಫಿನ್‌ರನ್ನು 6-4, 7-6(7/5) ಸೆಟ್‌ಗಳ ಅಂತರದಿಂದ ಮಣಿಸಿದರು.
ನಡಾಲ್ 2016ರಲ್ಲಿ ಗಾಯದ ಸಮಸ್ಯೆಯಿಂದಾಗಿ ಫ್ರೆಂಚ್ ಓಪನ್‌ನ ಎರಡನೆ ಸುತ್ತಿನ ಪಂದ್ಯದಿಂದ ಹಿಂದೆ ಸರಿದಿದ್ದರು. ಆ ಬಳಿಕ ನಡೆದ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದರು.
ಅಬುಧಾಬಿಯಲ್ಲಿ ನಡೆದ ಪ್ರದರ್ಶನ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರುವ ನಡಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್ ಹಾಗೂ ಸೆಮಿ ಫೈನಲ್‌ನಲ್ಲಿ ಕೆನಡಾದ ಮಿಲಾಸ್ ರಾವೊನಿಕ್‌ರನ್ನು ಸೋಲಿಸಿದ್ದರು.
ನಡಾಲ್ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಕ್ಕೆ ತೆರಳಲಿದ್ದಾರೆ. ಗಾಫಿನ್ ಕತರ್ ಓಪನ್‌ನಲ್ಲಿ ಪಾಲ್ಗೊಳ್ಳಲು ದೋಹಾಕ್ಕೆ ತೆರಳಲಿದ್ದಾರೆ.





