ಶಾಸಕ ಪ್ಯೂಮೇಶ್‌ಗೆ 15 ಸಾವಿರ ರೂ. ಪಂಗನಾಮ
ಸೂರತ್, ಡಿ.31: ಪಂಗನಾಮ ಹಾಕಿಸಿಕೊಂಡವರು ಗುಜರಾತ್‌ನ ಅದಜನ್ ಕ್ಷೇತ್ರದ ಶಾಸಕ ಪ್ಯೂಮೇಶ್ ಮೋದಿ. ಪಂಗನಾಮ ಹಾಕಿದ ಆರೋಪದಲ್ಲಿ ಅಮಿತ್ ಶ್ರೀವಾಸ್ತವ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರ ಪರವಾಗಿ ವಾಯ್ಸ ಕಾಲ್ ಸೇವೆ ನೀಡುವುದಾಗಿ ನಂಬಿಸಿದ್ದ ಆರೋಪಿ, 15 ಸಾವಿರ ರೂ.ಗೆ ಎರಡು ಲಕ್ಷ ಕರೆಗಳ ಸೇವೆ ನೀಡುವುದಾಗಿ ಭರವಸೆ ನೀಡಿದ್ದ ಎಂದು ಆಪಾದಿಸಲಾಗಿದೆ.
ಈ ಯೋಜನೆಯ ಬಗ್ಗೆ ತಿಳಿದುಕೊಂಡ ಶಾಸಕ, ಆರೋಪಿಯ ಬ್ಯಾಂಕ್ ಖಾತೆಗೆ 15 ಸಾವಿರ ರೂ. ಜಮೆ ಮಾಡಿದ್ದರು. ಆರೋಪಿಯ ಭರವಸೆ ವಿಫಲವಾದ ಹಿನ್ನೆಲೆಯಲ್ಲಿ ಹಣವನ್ನು ವಾಪಸ್ ನೀಡುವಂತೆ ಶಾಸಕರು ಕೋರಿದ್ದರು. ಪೊಲೀಸರು ಇದೀಗ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Next Story





